ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹರತಾಳಕ್ಕೆ ವಿಶ್ವ ಹಿಂದು ಪರಿಷತ್ ಕರೆ ; ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಬಂದ್ ಕರೆ ಕೊಟ್ಟ ಮುಖಂಡರು.

ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹರತಾಳಕ್ಕೆ ವಿಶ್ವ ಹಿಂದು ಪರಿಷತ್ ಕರೆ ; ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಬಂದ್ ಕರೆ ಕೊಟ್ಟ ಮುಖಂಡರು.

ಮಂಗಳೂರು: ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಂದು ದಿನ ಹರತಾಳ (ಬಂದ್) ನಡೆಸುವಂತೆ ಕರೆ ಕೊಟ್ಟಿದೆ.

ನಡುರಾತ್ರಿ ವೇಳೆಗೆ ಎಜೆ ಆಸ್ಪತ್ರೆಗೆ ಭೇಟಿ ನೀಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಕಾರ್ಯಕರ್ತರ ಆಕ್ರೋಶಕ್ಕೆ ಕಿವಿಯಾದರು. ಈ ವೇಳೆ, ಕೊಲೆ ಘಟನೆಯನ್ನು ಖಂಡಿಸಿ ಒಂದು ದಿನ ಹರತಾಳ ನಡೆಸಬೇಕೆಂದು ಸೇರಿದ್ದ ಕಾರ್ಯಕರ್ತರು ಒತ್ತಾಯಿಸಿದರು.

ಇದರಂತೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶರಣ್ ಪಂಪ್ವೆಲ್, ಮೇ 2ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್ ಮಾಡಲಾಗುವುದು. ಕೊಲೆ ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಸುಹಾಸ್ ಶೆಟ್ಟಿ ಮತ್ತು ಗೆಳೆಯರು ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ತಲವಾರು ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದರು

Ads on article

Advertise in articles 1

advertising articles 2

Advertise under the article