ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸ್ಫೋಟ; ಇಂದು ಸಿಎಂ ತುರ್ತು ಸಭೆ.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸ್ಫೋಟ; ಇಂದು ಸಿಎಂ ತುರ್ತು ಸಭೆ.

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, 71 ಕೇಸ್ ದಾಖಲಾಗಿದೆ. ಕೊರೋನಾ ಸ್ಫೋಟವಾಗುತ್ತಿದ್ದಂತೆ ಸರ್ಕಾರ ಕೂಡ ಹೆಚ್ಚೆತ್ತುಕೊಳ್ಳುತ್ತಿದೆ. ಹೆಚ್ಚುತ್ತಿರುವ ಕೊರೋನಾ ಸೋಂಕು ಹಿನ್ನೆಲೆ ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತುಸಭೆ ಕರೆದಿದ್ದಾರೆ.

ಕೊರೋನಾ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಂದು ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಜನಸಂದಣಿ ಪ್ರದೇಶದಲ್ಲಿ, ಮಕ್ಕಳು, ಬಾಣಂತಿಯರು, ವಯಸ್ಸಾದವರು, ಇಮ್ಯೂನಿಟಿ ಕಡಿಮೆ ಇರುವುವವರು ಮಾಸ್ಕ್‌ ಧರಿಸುವುದು ಸೂಕ್ತ. ಸಿಎಂ‌ ಇಂದು ಸಂಜೆ 5 ಗಂಟೆಗೆ ಸಭೆ ಕರೆದಿದ್ದಾರೆ. ಉನ್ನತ ವೈದ್ಯಕೀಯ ಶಿಕ್ಷಣ ಸಚಿವ, ತಜ್ಞರು ಎಲ್ಲರೂ ಸಭೆ ನಡೆಸುತ್ತಿದ್ದೇವೆ. ಇಂದಿನಿಂದ RTPCR ಕಿಟ್ ಗಳು ಪೊರೈಕೆ ಆಗುತ್ತಿವೆ. ವಿನಾಕಾರಣ ಟೆಸ್ಟ್ ಗಳನ್ನು ಮಾಡಲ್ಲ. ಸಾರಿ ಕೇಸ್ ಗಳನ್ನ ಕಡ್ಡಾಯವಾಗಿ ಟೆಸ್ಟ್ ಮಾಡುತ್ತೇವೆ. ಜನರ ಮಧ್ಯೆ ಹೋಗಿ ಜಾಗೃತಿ ಮೂಡಿಸುವ ಸಭೆ ನಡೆಸಿದ್ದೇವೆ. ಆದಷ್ಟು ಜನರು ಸಹ ಸಹಕಾರ ಕೊಡಬೇಕು. ಪ್ರಕರಣಗಳು ಹೆಚ್ಚಾದ್ರೆ ಮಾತ್ರ ಕೋವಿಡ್ ವಾರ್ಡ್ ಗಳನ್ನ ಸ್ಥಾಪನೆ ಮಾಡುತ್ತೇವೆ. ಪೂರ್ವ ತಯಾರಿಯಾಗಿ ವಾರ್ಡ್ ಗಳನ್ನ ಸ್ಪಾಪನೆ ಮಾಡ್ತಾ ಇದ್ದೇವೆ. 47 ಪ್ರಕರಣಗಳು ಆಯಕ್ಡಿವ್ ಆಗಿದ್ರು ಎಲ್ಲರೂ ಹೋಮ್ ಐಶೋಲೇಸನ್ ಆಗಿದ್ದಾರೆ. ಗಂಭೀರ ಸ್ವರೂಪದ ಕೋವಿಡ್ ರೂಪಾಂತರಗಳು ಕಂಡು ಬಂದಿಲ್ಲ. ಇಂದು ಸಿಎಂ ಜೊತೆ ಸಭೆ ನಡೆಸಿದ ಬಳಿಕ ತಜ್ಞರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಬೆಂಗಳೂರು ಕೊರೋನಾ ಹಾಟ್‌ ಸ್ಪಾಟ್!?

ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಸಿಲಿಕಾನ್‌ ಸಿಟಿ ಹೆಮ್ಮಾರಿಯ ಹಾಟ್‌ ಸ್ಪಾಟ್‌ ಆಗುತ್ತಿದೆ. ಮಹದೇವಪುರದಲ್ಲಿ 16 ಪ್ರಕರಣ ದಾಖಲಾಗಿದ್ದು, ಯಲಹಂಕ 4, ದಾಸಹರಳ್ಳಿ ಒಂದು, RR ನಗರ 1, ಬೊಮ್ಮನಹಳ್ಳಿ 7, ಬೆಂಗಳೂರು ಕೇಂದ್ರದಲ್ಲಿ 5 ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article