ನವದೆಹಲಿ :ಸಾಂಗ್ಲಿಯಲ್ಲಿ ಕರ್ನಾಟಕದ ವೈದ್ಯ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದಲೇ ಸಾಮೂಹಿಕ ಅತ್ಯಾ*ಚಾರ.

ನವದೆಹಲಿ: ಬೆಳಗಾವಿ ಮೂಲದ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಂಗ್ಲಿ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪುಣೆ, ಸೋಲಾಪುರ ಮತ್ತು ಸಾಂಗ್ಲಿ ಮೂಲದ ಬಂಧಿತರನ್ನು ಮೇ 27ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮೇ 18 ರಂದು 22 ವರ್ಷದ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಗೆ ಆಕೆಯ ಇಬ್ಬರು ಸಹಪಾಠಿಗಳು ಮತ್ತು ಅವರ ಸ್ನೇಹಿತ ಮಾದಕದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಕುಡಿದ ಮತ್ತಿನಲ್ಲಿ ಸುಮಾರು 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಮೇಲೆ ಇಬ್ಬರು ಸಹಪಾಠಿಗಳು ಹಾಗೂ ಓರ್ವ ಸ್ನೇಹಿತ ಅತ್ಯಾಚಾರ ಎಸಗಿದ್ದಾರೆ.
ಕಳೆದ ಮೇ 18ರಂದು ಮಧ್ಯರಾತ್ರಿ ಸಿನೆಮಾ ನೋಡಲು ಯುವತಿ ತನ್ನ ಸ್ನೇಹಿತರ ಜತೆ ತೆರಳಿದ್ದಳು. ನಂತರ ಯುವತಿಯನ್ನು ಖಾಸಗಿ ಫ್ಲ್ಯಾಟ್‌ಗೆ ಕರೆದೊಯ್ದ ದುರುಳರು ಯುವತಿಗೆ ಪಾನೀಯದಲ್ಲಿ ಮಾತ್ರೆ ಕೊಟ್ಟು ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಮೂವರೂ ಆರೋಪಿಗಳು ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ.
ಪ್ರಜ್ಞೆ ಬಂದ ಬಳಿಕ ವಿದ್ಯಾರ್ಥಿನಿ ಬೆಳಗಾವಿಯ ತಮ್ಮ ಮನೆಯವರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದು, ಈ ಬಗ್ಗೆ ಸಾಂಗ್ಲಿಯ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.