ಬೆಂಗಳೂರು :ಸಿನಿಮಾ ಸ್ಟೈಲಿನಲ್ಲಿ ಅಟ್ಟಾಡಿಸಿ ರೌಡಿ ಶೀಟರ್ ಬರ್ಬರ ಹತ್ಯೆ..!!!
Saturday, May 3, 2025

ರಾಮನಗರ: ಮಂಗಳೂರು ಬಳಿಕ, ರಾಮನಗರದಲ್ಲಿ ರೌಡಿ ಶೀಟರ್ ಬರ್ಬರವಾಗಿ ಹತ್ಯೆ ಮಾಡಿದಂತ ಘಟನೆ ನಡೆದಿದೆ.
ರೌಡಿ ಶೀಟರ್ ನನ್ನು ಸಿನಿಮಾ ಸ್ಟೈಲಿನಲ್ಲಿ ಬೈಕ್ ಗೆ ಕಾರು ಗುದ್ದಿಸಿ ಆ ಬಳಿಕ ಅಟ್ಟಾಡಿಸಿ ಭೀಕರವಾಗಿ ಕೊಲೆ ಮಾಡಿರುವಂತ ಘಟನೆ ರಾಮನಗರದ ಹಾರೋಹಳ್ಳಿ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಬಳಿ ನಡೆದಿದೆ.
ಬೈಕ್ ನಲ್ಲಿ ತೆರಳುತ್ತಿದ್ದಂತ ರೌಡಿ ಶೀಟರ್ ಸಂತೋಷ್ ಆಲಿಯಾಸ್ ಕರಡಿಯನ್ನು ಕಾರು ಗುದ್ದಿಸಿ, ಕೆಳಗೆ ಬೀಳಿಸಿ ಅಟ್ಟಾಡಿಸಿಕೊಂಡು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.