ನವದೆಹಲಿ :ಪಾಕಿಸ್ತಾನದ ಎಲ್ಲಾ ಡ್ರೋಣ್‌ಗಳು ಪುಡಿ ಪುಡಿ : ಗುರಿ ಮುಟ್ಟುವ ಮೊದಲೇ ಫಿನಿಶ್ ಮಾಡಿದ ಭಾರತೀಯ ಸೇನೆ.

ನವದೆಹಲಿ :ಪಾಕಿಸ್ತಾನದ ಎಲ್ಲಾ ಡ್ರೋಣ್‌ಗಳು ಪುಡಿ ಪುಡಿ : ಗುರಿ ಮುಟ್ಟುವ ಮೊದಲೇ ಫಿನಿಶ್ ಮಾಡಿದ ಭಾರತೀಯ ಸೇನೆ.

ನವದೆಹಲಿ: ಭಾರತ-ಪಾಕಿಸ್ತಾನ ನಡುವೆ ಘೋಷಣೆಯಾದ ಕದನ ವಿರಾಮ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಉಲ್ಲಂಘಿಸಿದೆ. ಭಾರತದ ಗಡಿ ಭಾಗಗಳ ಮೇಲೆ ದಾಳಿ ನಡೆಸಿದೆ. ಶ್ರೀನಗರದಾದ್ಯಂತ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ತಾನ ಹಲವು ಗಡಿ ಜಿಲ್ಲೆಗಳಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಗುಂಡಿನ ದಾಳಿ ಮತ್ತು ವೈಮಾನಿಕ ದಾಳಿಗಳನ್ನು ಆರಂಭಿಸಿತ್ತು.ಪಾಪಿ ಪಾಕಿಸ್ತಾನ ತನ್ನ ನರಿ ಬುದ್ದಿಯನ್ನ ಮತ್ತೆ ತೋರಿದೆ.

ಕೇವಲ 4 ಗಂಟೆಗಳಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ, ಪಾಕಿಸ್ತಾನ ಮತ್ತೆ ಹಲವಾರು ಸ್ಥಳಗಳಲ್ಲಿ ಡ್ರೋನ್ ದಾಳಿ ನಡೆಸಿತು. ಇದರಲ್ಲಿ ಗುಜರಾತ್, ರಾಜಸ್ಥಾನ ಹಾಗೂ ಜಮ್ಮು ಮತ್ತು ಶ್ರೀನಗರ ಸೇರಿವೆ. ಈ ಡ್ರೋನ್‌ಗಳಲ್ಲಿ ಒಂದು ಜಮ್ಮುವಿನ ವೈಷ್ಣೋ ದೇವಿ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಅದರ ನಂತರ ಅಲ್ಲಿ ವಿದ್ಯುತ್ ಕಡಿತಗೊಳಿಸಿಲಾಗಿದೆ.ಇದೀಗ ಪಾಕಿಸ್ತಾನ ದಾಳಿ ಮಾಡುತ್ತಿದ್ದಂತೆ ಭಾರತ ತಕ್ಮ ಪ್ರತ್ಯುತ್ತರ ನೀಡಿ, ಬಂದ ಎಲ್ಲಾ ಡ್ರೋಣ್‌‌ಗಳನ್ನು ಪುಡಿ ಪುಡಿ ಮಾಡಿದೆ ಎಂದು ವರದಿಯಾಗಿದೆ.

Ads on article

Advertise in articles 1

advertising articles 2

Advertise under the article