ನವದೆಹಲಿ :ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಪ್ರತಿದಾಳಿಗೆ ಭಾರತ ಸೂಚನೆ..!!

ನವದೆಹಲಿ: ಕದನ ವಿರಾಮಕ್ಕೆ ಅಮೆರಿಕ ಬಳಿ ಅಂಗಲಾಚಿದ್ದ ಪಾಕಿಸ್ತಾನ ಕದನ ವಿರಾಮ ಘೋಷಣೆಯಾಗಿ ಕೆಲವೇ ಗಂಟೆಗಳಲ್ಲಿ ಶನಿವಾರ ರಾತ್ರಿ ಕದನ ವಿರಾಮ ಉಲ್ಲಂಘಿಸಿದೆ.
ಜಮ್ಮು ಕಾಶ್ಮೀರ ಭಾಗದ ಆರು ಕಡೆ ಪಾಕಿಸ್ತಾನ ಡ್ರೋನ್ ಹಾಗೂ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ.
LOC ಗಡಿಯಲ್ಲಿ ಸುಮಾರು 6 ಸ್ಥಳಗಳ ಮೇಲೆ ಪಾಪಿ ಪಾಕ್ ಕದನ ವಿರಾಮ ಉಲ್ಲಂಘಿಸಿ ಮತ್ತೆ ಉದ್ಧಟತನ ತೋರಿದೆ.
ಅಖ್ಮೂರ್, ಪೂಂಚ್, ರಚೌರಿ ಸೇರಿ ಹಲವೆಡೆ ಪಾಕ್ ಕಡೆಯಿಂದ ಫೈರಿಂಗ್ ಮಾಡಲಾಗಿದೆ ಎಂದು ವರದಿಯಾಗಿದೆ.
ಕದನ ವಿರಾಮ ಘೋಷಣೆಯಾದರೂ ಪಾಕ್ ತನ್ನ ದುಷ್ಕೃತ್ಯ ಬಿಟ್ಟಿಲ್ಲ. ಶನಿವಾರ ರಾತ್ರಿ ಮತ್ತೆ ಜಮ್ಮು ಮತ್ತು ಕಾಶ್ಮೀರದ ರಜೌರಿ, ಅಖನೂರ್ ಮತ್ತು ಪೂಂಚ್‌ನಲ್ಲಿ ಗುಂಡಿನ ದಾಳಿ ನಡೆಸಿ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.
ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ದಾಳಿ ನಡೆಸಲಾಗುತ್ತಿದೆ. ಬಿಎಸ್‌ಎಫ್ ಕಡೆಯಿಂದ ಪ್ರತಿದಾಳಿ ನಡೆಯುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ ಕೂಡ ಶ್ರೀನಗರದ ಬಳಿಯೂ ಗುಂಡಿನ ಸದ್ದು ಕೇಳಿಸುತ್ತಿದೆ ಎಂದಿದ್ದಾರೆ.
ಪೋಖ್ರಾನ್ ಬಳಿಯೂ ಭಾರತೀಯ ಸೇನೆಯು ಪಾಕ್‌ನ ಒಂದು ಡ್ರೋನ್ ಅನ್ನು ಹೊಡೆದು ಹಾಕಿದೆ. ಸಾಂಬಾ ಬಳಿ ಏರ್ ಸೈರನ್ ಘೋಷಣೆ ಮಾಡಲಾಗಿದೆ. ಬಾರಾಮುಲ್ಲ ಬಳಿಯೂ ಡ್ರೋನ್‌ವೊಂದನ್ನು ಧ್ವಂಸ ಮಾಡಲಾಗಿದೆ. ಜಮ್ಮು ಕಾಶ್ಮೀರದ ಗಡಿಯುದ್ದಕ್ಕೂ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಮೂಲಗಳು ಹೇಳಿವೆ..