ಶ್ರೀ ನಗರ :ಮತ್ತೆ ತನ್ನ ದುಷ್ಟ ಬುದ್ಧಿ ತೋರಿಸಿದ ಪಾಪಿ ಪಾಕ್ – ವೈಷ್ಣೋದೇವಿ ದೇವಾಲಯದ ಮೇಲೆ ಡ್ರೋನ್ ದಾಳಿ..!!!
Saturday, May 10, 2025

ಶ್ರೀನಗರ: ಕದನ ವಿರಾಮದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಿ ಸೇನೆಯು ಹೆಚ್ಚು ಗುರಿಯಾಗಿಸಿಕೊಂಡಿದೆ. ಶ್ರೀನಗರದಲ್ಲಿ ಕೇವಲ 20 ನಿಮಿಷಗಳಲ್ಲಿ 50 ಕ್ಕೂ ಹೆಚ್ಚು ಸ್ಫೋಟಗಳು ಕೇಳಿಬಂದವು. ಜಮ್ಮು, ಉಧಂಪುರ ಮತ್ತು ಶ್ರೀನಗರದಲ್ಲಿ ಭಾರೀ ಸ್ಫೋಟಗಳ ಶಬ್ದಗಳು ಕೇಳಿಬಂದವು. ಜಮ್ಮುವಿನ ವೈಷ್ಣೋದೇವಿ ದೇವಸ್ಥಾನದ ಗೋಪುರಗಳ ಮೇಲೆ ಪಾಕಿಸ್ತಾನಿ ಡ್ರೋನ್ ಕಾಣಿಸಿಕೊಂಡಿದೆ . ಇದಲ್ಲದೆ, ಶಂಕರಾಚಾರ್ಯ ದೇವಸ್ಥಾನದ ಬಳಿ ಡ್ರೋನ್ ದಾಳಿ ನಡೆಸಲಾಯಿತು. ಅದೇ ಸಮಯದಲ್ಲಿ, ಪಂಜಾಬ್‌ನ ಅಮೃತಸರದ ಗಡಿಯ ಬಳಿ ಹಲವಾರು ಸ್ಫೋಟಗಳು ಕೇಳಿಸಿವೆ ಎಂದು ತಿಳಿದುಬಂದಿದೆ.
ಪಾಪಿ ಪಾಕಿಸ್ತಾನ ತನ್ನ ನರಿ ಬುದ್ದಿಯನ್ನ ಮತ್ತೆ ತೋರಿದೆ. ಕದನ ವಿರಾಮ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಉಲ್ಲಂಘಿಸಿದ್ದು ಮಾತ್ರವಲ್ಲದೆ,ಪ್ರಸಿದ್ಧ ವೈಷ್ಣೋ ದೇವಿ ಮಂದಿರದ ಮೇಲೆ ದಾಳಿಗೆ ಯತ್ನಿಸಿದೆ. ಶನಿವಾರ ಸಂಜೆ ಸುಮಾರು 8 ಗಂಟೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಡ್ರೋನ್ ದಾಳಿಆರಂಭಿಸಿದೆ