
ಬೆಳಗಾವಿ :ಮದುವೆ ಆಗದ್ದಕ್ಕೆ ನೊಂದು ವಿಷ ಸೇವಿಸಿ ಸಹೋದರರು ಆತ್ಮಹತ್ಯೆ.
Saturday, May 31, 2025

ಬೆಳಗಾವಿ: ಮದುವೆ ಆಗದ್ದಕ್ಕೆ ನೊಂದು ವಿಷ ಸೇವಿಸಿ ಸಹೋದರರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಸಂತೋಷ ರವೀಂದ್ರ ಗುಂಡೆ(55), ಅಣ್ಣಾ ಸಾಹೇಬ ರವೀಂದ್ರ ಗುಂಡೆ(50) ಮೃತಪಟ್ಟ ಸಹೋದರರು ಎಂದು ತಿಳಿದು ಬಂದಿದೆ.
ಇಬ್ಬರು ಸಹೋದರರಿಗೆ ಮದುವೆಯಾಗಿರಲಿಲ್ಲ. ಇದರಿಂದ ಮನನೊಂದು ಮದ್ಯ ಸೇವನೆಯ ಚಟಕ್ಕೆ ಬಿದ್ದಿದ್ದರು. ಕುಡಿತದ ನಶೆಯಲ್ಲಿ ವಿಷಕಾರಿ ಪದಾರ್ಥ ಸೇವನೆ ಮಾಡ ಅಸ್ವಸ್ಥರಾಗಿದ್ದ ಇಬ್ಬರನ್ನು ಕೂಡಲೇ ಮಹಾರಾಷ್ಟ್ರದ ಗಡಹಿಂಗ್ಲಜ್ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾದ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.