ಕಲಬುರಗಿ:ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !ಕಲಬುರಗಿಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದಕ್ಕೆ ಪ್ರತಿಭಟನೆ.!!

ಕಲಬುರಗಿ : ಇತ್ತೀಚಿಗೆ ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ನೀಟ್ ಪರೀಕ್ಷೆಯಲ್ಲೂ ಅಧಿಕಾರಿಗಳು ಬ್ರಾಹ್ಮಣ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿದ ಪ್ರಸಂಗ ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದಿದೆ.
ನೀಟ್ ಪರೀಕ್ಷೆಗೆ ಬಂದಿದ್ದ ಶ್ರೀಪಾದ್ ಪಾಟೀಲ್ ಎಂಬ ವಿದ್ಯಾರ್ಥಿಗೆ ಜನಿವಾರ ತೆಗೆದು ಪರೀಕ್ಷಾ ಕೊಠಡಿಗೆ ಬಿಟ್ಟಿದ್ದು ಮತ್ತೆ ವಿವಾದ ಹೊತ್ತಿಕೊಳ್ಳುವಂತಾಗಿದೆ. ಘಟನೆ ಖಂಡಿಸಿ ಪರೀಕ್ಷಾ ಕೇಂದ್ರದ ಮುಂದೆ ಬ್ರಾಹ್ಮಣ ಸಮಾಜದ ಸದಸ್ಯರು ಪ್ರತಿಭಟನೆ ನಡೆಸಿದ್ದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜೆ ಹೊತ್ತಿಗೆ ಕಲಬುರಗಿ ನಗರದ ಸೆಂಟ್ ಮೇರಿ ಶಾಲೆಯ ಪರೀಕ್ಷಾ ಕೇಂದ್ರದ ಮುಂದೆ ಅದೇ ವಿದ್ಯಾರ್ಥಿಗೆ ಪುನಃ ಜನಿವಾರ ಧಾರಣೆ ಮಾಡಲಾಯಿತು. ನೂರಾರು ಜನ ಪ್ರತಿಭಟನಾಕಾರರ ಸಮ್ಮುಖದಲ್ಲಿಯೇ ವಿದ್ಯಾರ್ಥಿ ಶ್ರೀಪಾದ ಪಾಟೀಲ್ ಗೆ ಬ್ರಾಹ್ಮಣ ಆಚಾರ್ಯರು ಶಾಸ್ತ್ರೋಕ್ತವಾಗಿ ಜನಿವಾರ ಧಾರಣೆ ಮಾಡಿದ್ದಾರೆ. ವೇದ ಘೋಷಗಳನ್ನು ಮೊಳಗಿಸಿ ಜನಿವಾರ ಧಾರಣೆ ಮಾಡಿಸಿದ್ದಾರೆ.