ಪ್ರಯಾಗ್ ರಾಜ್ : ರೈತನನ್ನು ಮರಕ್ಕೆ ಕಟ್ಟಿ ಹೊಡೆದು ಕೊಂದು ಶವ ನದಿಗೆಸೆದ ಪತ್ನಿ, ಮಕ್ಕಳು!

ಪ್ರಯಾಗ್ ರಾಜ್ : ರೈತನನ್ನು ಮರಕ್ಕೆ ಕಟ್ಟಿ ಹೊಡೆದು ಕೊಂದು ಶವ ನದಿಗೆಸೆದ ಪತ್ನಿ, ಮಕ್ಕಳು!

ಪ್ರಯಾಗ್‌ರಾಜ್: ರೈತನೊಬ್ಬನನ್ನು ಅವನ ಹೆಂಡತಿ ಮತ್ತು ಪುತ್ರರು ಮನೆಯ ಹೊರಗೆ ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಂದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಸಾಕ್ಷ್ಯಗಳನ್ನು ಅಳಿಸಿಹಾಕಲು ಮೃತನ ಪತ್ನಿ ಆರೋಪಿಗಳು ಮೃತನ ಶವವನ್ನು ಗಂಗಾ ನದಿಗೆ ಎಸೆದಿದ್ದಾರೆ.

ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಂದ ಖಾಸ್ ನಿವಾಸಿ 58 ವರ್ಷದ ದಿನೇಶ್ ಕುಮಾರ್ ಮೌರ್ಯ ಕೆಲವು ದಿನಗಳ ಹಿಂದೆ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರು ಮನೆಯಲ್ಲಿ ಇರಿಸಲಾಗಿದ್ದ ಸುಮಾರು 50 ಕೆಜಿ ಸಾಸಿವೆಯನ್ನು ಮಾರಾಟ ಮಾಡಿದ್ದಾರೆಂದು ವರದಿಯಾದ ನಂತರ ಅವರ ಮತ್ತು ಅವರ ಕುಟುಂಬ ಸದಸ್ಯರ ನಡುವೆ ಘರ್ಷಣೆ ಪ್ರಾರಂಭವಾಯಿತು. ದಿನೇಶ್ ತನ್ನ ಪತ್ನಿ ಮತ್ತು ಪುತ್ರರೊಂದಿಗೆ ಸಮಾಲೋಚಿಸದೆ ಸಾಸಿವೆಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇದು ಅವರ ಪತ್ನಿಯ ಕೋಪಕ್ಕೆ ಕಾರಣವಾಯಿತು. ಇದಾದ ನಂತರ ಗಲಾಟೆ ನಡೆಯಿತು.

ಜಗಳದ ನಂತರ ದಿನೇಶ್ ಅವರನ್ನು ಮನೆಯ ಹೊರಗಿನ ಬೇವಿನ ಮರಕ್ಕೆ ಕಟ್ಟಿಹಾಕಿ ಕೋಲುಗಳಿಂದ ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಳಿಕ ರೈತನ ದೇಹವನ್ನು ಗಂಗಾ ನದಿಗೆ ಎಸೆದಿದ್ದಾರೆ. ದಿನೇಶ್ ಅವರ ಸೋದರಳಿಯ ಈ ದುರಂತ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article