ನವದೆಹಲಿ :ಭಾರತದಲ್ಲಿ ಜ್ಯೋತಿ ಮಲ್ಹೋತ್ರಾ ಜನಸಾಮಾನ್ಯೆ, ಪಾಕ್‌ನಲ್ಲಿ‌ ವಿಐಪಿ! ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ..

ನವದೆಹಲಿ :ಭಾರತದಲ್ಲಿ ಜ್ಯೋತಿ ಮಲ್ಹೋತ್ರಾ ಜನಸಾಮಾನ್ಯೆ, ಪಾಕ್‌ನಲ್ಲಿ‌ ವಿಐಪಿ! ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ..

ನವದೆಹಲಿ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತಳಾಗಿರುವ ಭಾರತದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಪಾಕಿಸ್ತಾನದಲ್ಲಿ ವಿಐಪಿ ಸೌಲಭ್ಯ ಸಿಗುತ್ತಿತ್ತು ಎನ್ನುವ ಮಾಹಿತಿ ಬಹಿರಂಗವಾಗಿದೆ.

ಆಕೆಯ ವಿಚಾರಣೆ ವೇಳೆ ಹಲವು ಸ್ಫೋಟಕ ಸಂಗತಿಗಳು ಬಯಲಾಗಿವೆ. ಭಾರತದಲ್ಲಿ ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದ ಜ್ಯೋತಿಗೆ ಪಾಕಿಸ್ತಾನದಲ್ಲಿ ವಿಐಪಿ ಸತ್ಕಾರ ಆಕೆಗೆ ದೊರೆಯುತ್ತಿತ್ತಂತೆ. ಆಕೆಯೇ ಈ‌ ಮಾಹಿತಿ ಬಹಿರಂಗಪಡಿಸಿದ್ದಾಳೆ.

ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿ ಡ್ಯಾನಿಶ್ ಮತ್ತು ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳ ಜತೆ ಈಕೆ ನಿಕಟ ಸಂಪರ್ಕ ಹೊಂದಿದ್ದು, ಇದೇ ಕಾರಣಕ್ಕೆ ಆಕೆಗೆ ವಿಐಪಿ ಸುಲಭ್ಯ ದೊರೆಯುತ್ತಿತ್ತು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದಲ್ಲಿ ಹೈ ಪ್ರೊಫೈಲ್ ಪಾರ್ಟಿಗಳಿಗೆ ಹಾಜರಾಗುತ್ತಿದ್ದಳು. ಗುಪ್ತಚರ ಸಂಸ್ಥೆಗಳಲ್ಲದೇ ಇತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಳು ಎಂದು ತಿಳಿದುಬಂದಿದೆ.

ನೇಪಾಳಕ್ಕೆ ಭೇಟಿ ನೀಡಿದ್ದ ಜ್ಯೋತಿ ಪಾಕಿಸ್ತಾನ ರಾಯಭಾರ ಕಚೇರಿಗೂ ಹೋಗಿದ್ದಳು. ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ಅಲ್ಲಿಂದ ವಿಡಿಯೋ ಮಾಡಿ ತನ್ನ ಯೂಟ್ಯೂಬ್ ಚಾನಲ್‌ಗೆ ಅಪ್ಲೋಡ್ ಮಾಡಿದ್ದಳು. ಪಾಕಿಸ್ತಾನ ರಾಯಭಾರ ಕಚೇರಿಗೆ ಆಕೆ ಭೇಟಿ ಕೊಟ್ಟಾಗ ಡ್ಯಾನಿಶ್ ತುಂಬಾ ಸ್ನೇಹಪರ ವ್ಯಕ್ತಿಯಂತೆ ಆಕೆಯನ್ನು ಸ್ವಾಗತಿಸಿದ್ದ.

ಇನ್ನು ಜ್ಯೋತಿ ಮಲ್ಹೋತ್ರಾ ಜನವರಿ 2025ರಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್ ಗೂ ಭೇಟಿ ನೀಡಿದ್ದಳು. ಪಹಲ್ಗಾಮ್ ಗೆ ಯಾವ ಮಾರ್ಗವಾಗಿ ಬರಬೇಕು? ಬಳಿಕ ಎಲ್ಲಿಗೆ ಭೇಟಿ ನೀಡಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜ್ಯೋತಿ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ವಿವರಿಸಿದ್ದಳು.

ಪಹಲ್ಗಾಮ್, ಆರುಬೆತಾಪ್, ಚಂದನ್ ವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿ ವಿವರಿಸಿದ್ದಳು. ಜ್ಯೋತಿ ಮಲ್ಹೋತ್ರಾ ಚೀನಾಗೆ ಭೇಟಿ ನೀಡಲು ತೆರಳಿದ್ದ ವೇಳೆ ಭದ್ರತಾ ಸಂಸ್ಥೆಯ ಗಮನಕ್ಕೆ ಬಂದಿತ್ತು. ಈ ಮೂಲಕ ಆಕೆಯ ಮೇಲೆ ನಿಗಾ ಇಡಲಾಗಿತ್ತು. ಈಗಪ ಜ್ಯೋತಿ ಮಲ್ಹೋತ್ರಾ ಬಂಧನವಾಗಿದ್ದು ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article