ಕೊಲ್ಕತ್ತಾ : ನಾನು ಚಿಪ್ಸ್ ಕದ್ದಿಲ್ಲಮ್ಮ, ಆದ್ರೂ ಅವಮಾನ ಮಾಡಿದ್ರು… ಚಿಪ್ಸ್ ಪ್ಯಾಕೆಟ್ ಕದ್ದ ಆರೋಪದ ಮೇಲೆ ಅಂಗಡಿಯವನು ಮಾಡಿದ ಅವಮಾನ; ಮುಗ್ಧ ಬಾಲಕನ ಜೀವ ಹೋಯ್ತು..
ಚಿಪ್ಸ್ ಪ್ಯಾಕೇಟ್ ಕದ್ದ ಆರೋಪದ ಮೇಲೆ ನಾಲ್ವರ ಎದುರು ಅಂಗಡಿಯವ ಬೈದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..
ಅವಮಾನಕ್ಕೊಳಗಾದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬರೆದ ಡೆತ್ ನೋಟ್ನಲ್ಲಿ ಅಮ್ಮಾ ನಾನು ಚಿಪ್ಸ್ ಕದ್ದಿಲ್ಲ ಎಂದು ಹೇಳಿದ್ದಾನೆ. ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏಳನೇ ತರಗತಿಯ ವಿದ್ಯಾರ್ಥಿ ಕೃಷ್ಣೇಂದು ದಾಸ್ ಎಂದು ಗುರುತಿಸಲಾದ ಬಾಲಕ ಚಿಪ್ಸ್ ಖರೀದಿಸಲು ಅಂಗಡಿಗೆ ಹೋಗಿದ್ದ ಎಂದು ವರದಿಯಾಗಿದೆ.
ಆತನ ಕುಟುಂಬದ ಪ್ರಕಾರ, ಶುಭಂಕರ್ ದೀಕ್ಷಿತ್ ಎಂದು ಗುರುತಿಸಲಾದ ಅಂಗಡಿಯವನಿಗೆ ಪದೇ ಪದೇ ಕರೆದರೂ ಆತ ಉತ್ತರಿಸಿರಲಿಲ್ಲ, ಅಂಕಲ್ ನಾನು ಚಿಪ್ಸ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರೂ ಆ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ, ಅಂಗಡಿಯವರು ಇಲ್ಲ, ಆಮೇಲೆ ಹಣ ಕೊಟ್ಟರಾಯ್ತು ಎಂದು ಹೇಳಿ ಪ್ಯಾಕೆಟ್ ತೆಗೆದುಕೊಂಡಿದ್ದಾನೆ.
ಕೆಲ ಸಮಯದ ಬಳಿಕ ಅಂಗಡಿಯವನು ಬಂದು, ಕೃಷ್ಣೇಂದುಗೆ ಕಪಾಳಮೋಕ್ಷ ಮಾಡಿ, ಬಸ್ಕಿ ಹೊಡೆಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. ಬಾಲಕನ ತಾಯಿಯನ್ನು ಸ್ಥಳಕ್ಕೆ ಕರೆಸಿ ಗದರಿಸಲಾಯಿತು.
ಕೃಷ್ಣೇಂದು ಚಿಪ್ಸ್ಗೆ ಹಣ ಕೊಡಬೇಕೆಂದಿದ್ದೆ ಎಂದು ವಿವರಿಸಲು ಪ್ರಯತ್ನಿಸಿದ್ದಾಗಿ ವರದಿಯಾಗಿದೆ, ಆದರೆ ಸುಳ್ಳು ಹೇಳಿದ್ದಾನೆಂದು ಆರೋಪಿಸಲಾಗಿದೆ.
ದೀಕ್ಷಿತ್ ಅವರ ಒಪ್ಪಿಗೆಯಿಲ್ಲದೆ ಪ್ಯಾಕೆಟ್ ತೆಗೆದುಕೊಂಡಿದ್ದಕ್ಕಾಗಿ ಕ್ಷಮೆಯಾಚಿಸಿದ ತಕ್ಷಣವೇ ಹಣ ಕೊಡಲು ಮುಂದಾದರು. ಆದರೆ ಅಂಗಡಿ ಮಾಲೀಕ ಅವನು ಸುಳ್ಳು ಹೇಳುತ್ತಿದ್ದಾನೆಂದು ಆರೋಪಿಸಿದ್ದಾನೆ.
ಮನೆಗೆ ಹಿಂತಿರುಗಿದಾಗ, ಹುಡುಗ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ, ನಂತರ ಅವನು ಬಾಗಿಲು ತೆರೆಯಲೇ ಇಲ್ಲ, ಆತ ಪ್ರಜ್ಞಾಹೀನನಾಗಿ ಬಿದ್ದಿದ್ದ.
ಅರ್ಧ ಖಾಲಿಯಾದ ಕೀಟನಾಶಕ ಬಾಟಲಿಯು ಅವನ ಪಕ್ಕದಲ್ಲಿ ಬಿದ್ದಿದ್ದು, ಬಾಯಿಯಿಂದ ನೊರೆ ಬರುತ್ತಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರೊಳಗೆ ಪ್ರಾಣಪಕ್ಷಿ ಹಾರಿಹೋಗಿತ್ತು.