ನವದೆಹಲಿ :ಕಾರವಾರದಲ್ಲಿ ವಿಕ್ರಾಂತ್ ಐಎನ್ಎಸ್ ನಿಯೋಜನೆ; ಪಾಕ್ ತಿರುಗೇಟಿಗೆ ಭಾರತ ಸಜ್ಜು.
Thursday, May 8, 2025

ನವದೆಹಲಿ: ಭಾರತೀಯ ನೌಕಾಪಡೆಯಿಂದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ನಿಯೋಜನೆಯನ್ನು ಮಾಡಲಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಸಜ್ಜುಗೊಳಿಸಲಾಗಿದೆ.
ಭಾರತೀಯ ನೌಕಾಪಡೆಯು ತನ್ನ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಕಾರವಾರ ಕರಾವಳಿಯ ಬಳಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ನ ಸ್ಟ್ರೈಕ್ ಗ್ರೂಪ್ ವಿಮಾನವಾಹಕ ನೌಕೆ, ವಿಧ್ವಂಸಕ, ಫ್ರಿಗೇಟ್, ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಮತ್ತು ಇತರ ಬೆಂಬಲ ಹಡಗುಗಳನ್ನು ಒಳಗೊಂಡಿದೆ.