ಪಾಕಿಸ್ತಾನ :ಭಾರತೀಯ ದಾಳಿಯನ್ನು ಉಲ್ಲೇಖಿಸಿ ಪಾಕ್ ಸಂಸತ್ ನಲ್ಲಿ ಕಣ್ಣೀರಿಟ್ಟ ಸಂಸದ.

ಪಾಕಿಸ್ತಾನ :ಭಾರತೀಯ ದಾಳಿಯನ್ನು ಉಲ್ಲೇಖಿಸಿ ಪಾಕ್ ಸಂಸತ್ ನಲ್ಲಿ ಕಣ್ಣೀರಿಟ್ಟ ಸಂಸದ.

ಪಾಕಿಸ್ತಾನ :ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಖತಂ ಆಗಿದ್ದಾರೆ. ಪಾಕಿಸ್ತಾನದ 9 ಉಗ್ರ ನೆಲೆಯನ್ನು ಟಾರ್ಗೆಟ್ ಮಾಡಿ ಭಾರತ ದಾಳಿ ಮಾಡಿತ್ತು. ಇಷ್ಟೇ ಅಲ್ಲ ಭಾರತದ ಡ್ರೋನ್ ಲಾಹೋರ್‌ಗೆ ನುಗ್ಗಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಹೊಡೆದುರುಳಿಸಿತ್ತು. ಇದರಿಂದ ಪಾಕಿಸ್ತಾನ ಜನತೆ ಬೆಚ್ಚಿ ಬಿದ್ದಿದ್ದಾರೆ.

ಇದೇ ವೇಳೆ ಸಂಸತ್ತಿನಲ್ಲಿ ಚರ್ಚೆಯ ಸಮಯದಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನಿ ಸಂಸದ ತಾಹಿರ್ ಇಕ್ಬಾಲ್ ಭಾರತೀಯ ದಾಳಿಯನ್ನು ಉಲ್ಲೇಖಿಸಿ ಕಣ್ಣೀರಿಟ್ಟಿದ್ದಾರೆ.

ಸಂಸದ ತಾಹೀರ್ ಇಕ್ಬಾಲ್, ಪಾಕಿಸ್ತಾನದ ಮಾಜಿ ಸೇನಾಧಿಕಾರಿಯಾಗಿದ್ದಾರೆ. ಸತತ ದಾಳಿಯಾಗುತ್ತಿದೆ. ನಾವು ದುರ್ಬಲರಾಗುತ್ತಿದ್ದೇವೆ. ಮುಗ್ದ ಜನರನ್ನು ಕಾಪಾಡಬೇಕಿದೆ. ಈ ಸಂದರ್ಭದಲ್ಲಿ ನಾನು ಎಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ. ನಾವೆಲ್ಲಾ ಒಗ್ಗಟ್ಟಾಗಬೇಕು. ನಾವು ಅಲ್ಲಾನ ಬಳಿ ಪ್ರಾರ್ಥಿಸಬೇಕು. ಅಲ್ಲಾ ಈ ದೇಶವನ್ನು ಕಾಪಾಡಬೇಕು ಎಂದು ತಾಹೀರ್ ಇಕ್ಬಾಲ್ ಕಣ್ಣೀರಿಡಿದ್ದಾರೆ.

ಲಾಹೋರ್ ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ನ್ನು ನಾಶ ಮಾಡಿದೆ. ಭಾರತದ ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಬಟಿಂಡಾ, ಚಂಡೀಗಢ, ಪಠಾಣ್‌ಕೋಟ್‌ಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನದಿಂದ ವಿಫಲ ಪ್ರಯತ್ನಗಳು ನಡೆದಿವೆ. ಇದಲ್ಲದೆ, ಶ್ರೀನಗರ, ಅವಂತಿಪೋರಾ, ಆದಂಪುರ, ಫಲೋಡಿ, ಭುಜ್‌ಗಳಲ್ಲಿಯೂ ದಾಳಿಯ ಪ್ರಯತ್ನಗಳು ನಡೆದವು ಆದರೆ ಭಾರತ ಪಾಕಿಸ್ತಾನದ ಎಲ್ಲಾ ಕ್ಷಿಪಣಿಗಳನ್ನು ಗಾಳಿಯಲ್ಲೇ ಹೊಡೆದುರುಳಿಸಿದೆ.

Ads on article

Advertise in articles 1

advertising articles 2

Advertise under the article