ನವದೆಹಲಿ :ಶನಿವಾರ ಸಂಜೆ ಐದರಿಂದಲೇ ಕದನ ವಿರಾಮ ಜಾರಿ; ಭಾರತದ ಅಧಿಕೃತ ಹೇಳಿಕೆ.

ನವದೆಹಲಿ :ಶನಿವಾರ ಸಂಜೆ ಐದರಿಂದಲೇ ಕದನ ವಿರಾಮ ಜಾರಿ; ಭಾರತದ ಅಧಿಕೃತ ಹೇಳಿಕೆ.

ನವದೆಹಲಿ :ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಂಧಾನ ಮಾತುಕತೆಗಳು ಸಫಲವಾಗಿದ್ದು, ಪಾಕಿಸ್ತಾನ ಸರ್ಕಾರ ಕದನ ವಿರಾಮ ಘೋಷಿಸಿತು. ಅದರ ಬೆನ್ನಲ್ಲೇ ಭಾರತ ಕೂಡ ಕದನ ವಿರಾಮ ಘೋಷಿಸಿದೆ.

ಉಭಯ ದೇಶಗಳ ಜತೆ ಅಮೆರಿಕ ಶಾಂತಿ ಮಾತುಕತೆ ನಡೆಸಿದ್ದು ಯಶಸ್ವಿಯಾಗಿದ್ದು, ಶನಿವಾರ ಸಂಜೆ 5 ಗಂಟೆಯಿಂದಲೇ ಕದಮ ವಿರಾಮ ಘೋಷಣೆ ಮಾಡಿರುವುದಾಗಿ ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.

ಸದ್ಯ ಉಭಯ ದೇಶಗಳ ಜತೆ ಅಮೆರಿಕ ಶಾಂತಿ ಮಾತುಕತೆ ನಡೆಸಿದ್ದು ಯಶಸ್ವಿಯಾಗಿದ್ದು, ಶನಿವಾರ ಸಂಜೆ 5 ಗಂಟೆಯಿಂದಲೇ ಕದಮ ವಿರಾಮ ಘೋಷಣೆ ಮಾಡಿರುವುದಾಗಿ ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಗೆ ಸಂಬಂಧಿಸಿದಂತೆ ಭಾರತ ವಿದೇಶಾಂಗ ಕಾರ್ಯದರ್ಶಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಭಾರತ-ಪಾಕ್ ನಡುವೆ ಕದನ ವಿರಾಮ ಒಪ್ಪಂದವಾಗಿದೆ. ಶನಿವಾರ ಸಂಜೆ 5 ಗಂಟೆಯಿಂದ ಸೇನಾ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮೇ 12 ರಂದು ನೀಡಲಾಗುವುದು ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿದ್ದು, ಈ ಕ್ಷಣದಿಂದಲೇ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿರುವುದಾಗಿಯೂ ತಿಳಿಸಿವೆ.

ಈ ಕುರಿತಂತೆ ಉಭಯ ರಾಷ್ಟ್ರಗಳ ಜೊತೆಗೆ ಕಳೆದ 48 ಗಂಟೆಯಿಂದಲೇ ಅಮೆರಿಕ ಮಾತುಕತೆ ನಡೆಸಿದ್ದು ಯಶಸ್ವಿಯಾಗಿದೆ.

ಭಾರತ-ಪಾಕಿಸ್ತಾನ ನಡುವೆ ಮೇ 6 ರಿಂದ ಆರಂಭವಾಗಿದ್ದ ಯುದ್ಧಧ ಆತಂಕ ಎದುರಾಗಿತ್ತು. ಏಪ್ರಿಲ್ 22 ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕರು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿನ ಬೈಸರನ್ ಕಣಿವೆಯಲ್ಲಿ ಬರೋಬ್ಬರಿ 26 ಅಮಾಯಕ ಹಿಂದುಗಳನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಭಾರತ ಭಯೋತ್ಪಾದಕರ ನೆಲೆಗಳನ್ನು ಉಡೀಸ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತೀಯ ನಾಗರೀಕರ ಮೇಲೆ ದಾಳಿ ನಡೆಸಿತ್ತು.

Ads on article

Advertise in articles 1

advertising articles 2

Advertise under the article