ಉತ್ತರ ಭಾರತ:ಜನಿಸಿದ ಮಗು ಹೆಣ್ಣೆಂದು ಆಸ್ಪತ್ರೆಯಲ್ಲೇ ಬಿಟ್ಟು ಹೋದ ಪೋಷಕರು.!!

ಉತ್ತರ ಭಾರತ :ಇಂದಿನ ಕಾಲದಲ್ಲಿ ಹೆಣ್ಣಾಗಲಿ ಗಂಡಾಗಲಿ ಕನಿಷ್ಠ ಮಗುವಿರಲಿ ಎನ್ನುವಂತಹ ಬಹುತೇಕರಿಗೆ ಬೇಕೂ ಎಂದರೂ ಮಕ್ಕಳಾಗುವುದಿಲ್ಲ. ಆದರೆ ಮಗು ಸುಲಭವಾಗಿ ಆಗುವವರು ಮಕ್ಕಳನ್ನು ಬೀದಿಯಲ್ಲೋ ಆಸ್ಪತ್ರೆಯಲ್ಲೋ ಬಿಟ್ಟು ಕರುಣೆ ಇಲ್ಲದಂತೆ ಹೊರಟು ಹೋಗುತ್ತಾರೆ. ಇದೀಗ ಹೆಣ್ಣು ಮಗುವಾಗಿದೆ ಎಂದು ಪೋಷಕರು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದಂತಹ ಘಟನೆ ಉತ್ತರ ಭಾರತದಲ್ಲಿ ನಡೆದಿದೆ. ಇದನ್ನು ಆಸ್ಪತ್ರೆಯ ವೈದ್ಯೆಯೊಬ್ಬರು ಪೋಷಕರ ಕಣ್ಣು ತೆರೆಸುವ ವೀಡಿಯೋವೊಂದನ್ನು ಮಾಡಿದ್ದು, ಇದೀಗ ಪೋಷಕರು ಮರಳಿ ಬಂದು ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ.
ವೈರಲ್ ಆದ ವೀಡಿಯೋವೊಂದರಲ್ಲಿ ಡಾ. ಸುಷ್ಮಾ ಎಂಬ ವೈದ್ಯರು ಮಗುವನ್ನು ಎತ್ತಿಕೊಂಡು ಇಂದು ಒಂದು ಮುದ್ದಾದ ಹೆಣ್ಣು ಮಗು ನಿನ್ನಯಷ್ಟೇ ಈ ಮಗುವಿನ ಜನ್ಮವಾಗಿದೆ. ಈ ಮಗು ಈಕೆಯ ತಾಯಿಗೆ ಬದುಕುಳಿದಿರುವ 2ನೇ ಹೆಣ್ಣು ಮಗುವಾಗಿದೆ. ತಾಯಿಗೆ ಇದು ಮೂರನೇ ಹೆರಿಗೆಯಾಗಿದ್ದು, ಈ ಹಿಂದೆಯೇ ಒಂದು ಹೆಣ್ಣು ಮಗು ತೀರಿ ಹೋಗಿದೆ. ಸಾಲಾಗಿ ಮೂರು ಹೆಣ್ಣು ಮಕ್ಕಳೇ ಹುಟ್ಟಿದ್ದರಿಂದ ಮನೆಯವರು ಬಹಳ ಬೇಸರಗೊಂಡಿದ್ದಾರೆ. ಈ ಮಗುವಿನ ತಂದೆ ಒಮ್ಮೆಯೂ ಈಕೆಯನ್ನು ಭೇಟಿ ಮಾಡಿಲ್ಲ, ಪೋನ್ ಮಾಡಿಯೂ ತಾಯಿಯನ್ನು ವಿಚಾರಿಸಿಲ್ಲ, ಅಲ್ಲದೇ ಮನೆಯವರು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಬಾ ಎಂದು ತಾಯಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಒಬ್ಬಳು ವೈದ್ಯೆಯಾಗಿ ಒಬ್ಬಳು ಮಗಳಾಗಿ, ಒಬ್ಬಳು ಹೆಣ್ಣಾಗಿ, ಒಬ್ಬಳು ತಾಯಿಯಾಗಿ ನನಗೆ ಈ ವಿಚಾರ ತುಂಬಾ ಬೇಸರವಾಗುತ್ತಿದೆ. ನಮ್ಮ ದೇಶದ ರಾಷ್ಟ್ರಪತಿ ಮಹಿಳೆಯಾಗಿದ್ದಾರೆ. ಅಂತರಿಕ್ಷಕ್ಕೆ ಹೋದಂತಹ ಸಾಧನೆ ಮಾಡಿದ ಸುನೀತಾ ವಿಲಿಯಮ್ಸ್ ಕೂಡ ಹೆಣ್ಣಾಗಿದ್ದಾರೆ. ಹೀಗಿರುವಾಗ ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ನೋಡಿ ಪೋಷಕರೇ ಮನ ಬದಲಾಯಿಸಿ ಬಂದು ಮಗುವನ್ನು ತೆಗೆದುಕೊಂಡು ಹೋದರು ಎಂದು ವೈದ್ಯರೇ ಮತ್ತೊಂದು ವೀಡಿಯೋದಲ್ಲಿ ಹೇಳಿದ್ದಾರೆ.