ತೆಲಂಗಾಣ :ರೇಷ್ಮೆ ಕೃಷಿಯಲ್ಲಿ ಲಕ್ಷಾಂತರ ರೂ ಆದಾಯ ಗಳಿಸುತ್ತಿರುವ ಯುವಕ ;ರಾಮಸ್ವಾಮಿ ಎಂಬ ಯುವಕರೊಬ್ಬರು ಎಂಬಿಎ ಪದವಿ ನಂತರ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡ ತೆಲಂಗಾಣ ದ ರಾಮಸ್ವಾಮಿ.
ತನ್ನ ಹೆತ್ತವರು ಮಲ್ಬೆರಿ ಕೃಷಿಯಲ್ಲಿ ದೀರ್ಘಕಾಲದಿಂದ ತೊಡಗಿಸಿಕೊಂಡಿದ್ದನ್ನು ಕಂಡು ಪ್ರೇರಿತನಾದ ಈ ಯುವಕ 2021 ರಲ್ಲಿ ಎಂಬಿಎ ಮುಗಿಸಿದ ನಂತರ ತನ್ನ ಕೆಲಸವನ್ನು ತೊರೆದು, ಪೂರ್ಣಾವಧಿ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇಂದು, ಏಳು ಎಕರೆ ಭೂಮಿಯಲ್ಲಿ ರೇಷ್ಮೆ ಹುಳು ಸಾಕಣೆ ನಡೆಸುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.
ರಾಮಸ್ವಾಮಿಯವರ ಪೋಷಕರಾದ ನರಸಿಮ್ಲು ಮತ್ತು ಭೂಲಕ್ಷ್ಮಿ 15 ವರ್ಷಗಳಿಗೂ ಹೆಚ್ಚು ಕಾಲದಿಂದ ರೇಷ್ಮೆ ಬೆಳೆಯುತ್ತಿದ್ದಾರೆ. ಶಾಲಾ ರಜಾದಿನಗಳಲ್ಲಿ ಪೋಷಕರ ಕೃಷಿ ಕೆಲಸ ನೋಡುತ್ತಾ ಹಾಗೂ ಅವರಿಗೆ ಸಹಾಯ ಮಾಡುತ್ತಾ, ಕ್ರಮೇಣ ತಾನೂ ಕೃಷಿಯಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ತದನಂತರ ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಇಂದ್ರಸೇನ ರೆಡ್ಡಿ ಅವರಿಂದ ಪ್ರೋತ್ಸಾಹಿಸಲ್ಪಟ್ಟ ಅವರು, ಕೇವಲ ಎರಡು ಎಕರೆ ಪ್ರದೇಶದಲ್ಲಿ ರೇಷ್ಮೆ ಹುಳು ಸಾಕಣೆಯನ್ನು ಪ್ರಾರಂಭಿಸಿದ್ದಾರೆ. ಇದೀಗ ಅವರ ಸಮರ್ಪಣೆ ಮತ್ತು ಬುದ್ಧಿವಂತ ವಿಧಾನದಿಂದಾಗಿ ತನ್ನ ಕೃಷಿ ಏಳು ಎಕರೆಗೆ ವಿಸ್ತರಿಸಿದೆ.
ಬೆಂಗಳೂರಿನಲ್ಲಿ ತರಬೇತಿ, ಚಂದಲಾಪುರದಲ್ಲಿ ಬ್ರ್ಯಾಂಡ್ : ಗುಣಮಟ್ಟದ ಉತ್ಪಾದನೆಯಾಗಬೇಕಾದ್ರೆ ಆರೋಗ್ಯಕರ ಮೊಟ್ಟೆಗಳಿಂದ ಸಾಧ್ಯ ಎಂಬುದನ್ನು ಅರ್ಥಮಾಡಿಕೊಂಡ ರಾಮಸ್ವಾಮಿ, ರೇಷ್ಮೆ ಹುಳುಗಳ ಮೊಟ್ಟೆ ಉತ್ಪಾದನೆ ಬಗ್ಗೆ ಬೆಂಗಳೂರಿನಲ್ಲಿ ಮೂರು ತಿಂಗಳವರೆಗೆ ತರಬೇತಿ ಪಡೆದಿದ್ದಾರೆ.
ಅಲ್ಲಿಂದು ಹಿಂದುರಿಗಿದ ನಂತರ, ಅವರು ಸಾಕಿ ಸೆಂಟರ್ ಎಂಬ ಬ್ರಾಂಡ್ ಹೆಸರಿನಲ್ಲಿ ರೇಷ್ಮೆ ಹುಳು ಮೊಟ್ಟೆ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದ್ದಾರೆ.
ರೇಷ್ಮೆ ಹುಳುಗಳಿಗೆ ಆಹಾರವಾಗಿ ಮಲ್ಬರಿ ಎಲೆ : ಉತ್ತಮ ಗುಣಮಟ್ಟದ ರೇಷ್ಮೆಯನ್ನು ನೀಡುವ ಬಲವಾದ ಹುಳುಗಳನ್ನು ಬೆಳೆಸುವುದಕ್ಕಾಗಿ ರಾಮಸ್ವಾಮಿ ಅವರು ರಸಭರಿತವಾದ ಮಲ್ಬರಿ ಎಲೆಗಳನ್ನು ಅವುಗಳಿಗೆ ಆಹಾರವಾಗಿ ನೀಡುತ್ತಾರೆ.
ಒಮ್ಮೆ ಈ ಮಲ್ಬರಿಯನ್ನು ನೆಟ್ಟರೆ, 90 ದಿನಗಳಲ್ಲಿ ಹೆಚ್ಚಿನ ಇಳುವರಿಯ ಎಲೆಗಳನ್ನು ಕೊಯ್ಲು ಮಾಡಬಹುದು. ಈ ಸಸ್ಯವು 30 ವರ್ಷಗಳವರೆಗೂ ಎಲೆಗಳನ್ನು ನೀಡುತ್ತದೆ. ಹವಾಮಾನ ವೈಪರೀತ್ಯ ಗಮನದಲ್ಲಿಟ್ಟುಕೊಂಡು, ಬಿರು ಬೇಸಿಗೆಯಲ್ಲಿಯೂ ಸ್ಥಿರವಾದ ಇಳುವರಿಯನ್ನು ಪಡೆಯುವ ನಿಟ್ಟಿನಲ್ಲಿ ರಾಮಸ್ವಾಮಿ ಅವರು ಸ್ಪ್ರಿಂಕ್ಲರ್ ನೀರಾವರಿ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.
ಮಾದರಿ ಕೇಂದ್ರವಾಗಿ ಮಾರ್ಪಟ್ಟ ತೋಟ : ವರಂಗಲ್ ಮತ್ತು ಹಿಂದೂಪುರದಾದ್ಯಂತ ರೇಷ್ಮೆ ಗೂಡುಗಳನ್ನು ಮಾರಾಟ ಮಾಡುತ್ತಿದ್ದಾರೆ. ಖರೀದಿದಾರರು ಮತ್ತು ಸಹ ರೈತರೂ ಕೂಡಾ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ರಾಮಸ್ವಾಮಿ ಅವರ ತೋಟವು ಮಾದರಿ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಲಾಭದಾಯಕ ಹಸಿರು ಉದ್ಯಮದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವ ಸಂದರ್ಶಕರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.