ಮಂಗಳೂರು: ಕಾರ್ಪೊರೇಟ್ ಕಂಪನಿಯ ಇಂಜಿನಿಯರ್ ಕೆಲಸ ಬಿಟ್ಟು ನಮ್ಮ ಗಾರ್ಡನ್ ಎಂಬ ಆನ್‌ಲೈನ್ ಉದ್ಯಮ ಆರಂಭಿಸಿದ ಮಾಜಿ ಇಂಜಿನಿಯರ್ ಜ್ಞಾನ ಶೆಟ್ಟಿ; ಜ್ಞಾನ ಶೆಟ್ಟಿ ಅವರ ಮನೆ ಕೇವಲ ಮನೆಯಲ್ಲ ಸುಂದರ ಸ್ವರ್ಗಮನೆಯ ಗೊಡೆ, ನೆಲ, ಕೋಣೆ, ಅಂಗಳದ ತುಂಬೆಲ್ಲಾ ಗಿಡಗಳದೇ ಪ್ರಪಂಚ!!

ಮಂಗಳೂರು: ಕಾರ್ಪೊರೇಟ್ ಕಂಪನಿಯ ಇಂಜಿನಿಯರ್ ಕೆಲಸ ಬಿಟ್ಟು ನಮ್ಮ ಗಾರ್ಡನ್ ಎಂಬ ಆನ್‌ಲೈನ್ ಉದ್ಯಮ ಆರಂಭಿಸಿದ ಮಾಜಿ ಇಂಜಿನಿಯರ್ ಜ್ಞಾನ ಶೆಟ್ಟಿ; ಜ್ಞಾನ ಶೆಟ್ಟಿ ಅವರ ಮನೆ ಕೇವಲ ಮನೆಯಲ್ಲ ಸುಂದರ ಸ್ವರ್ಗಮನೆಯ ಗೊಡೆ, ನೆಲ, ಕೋಣೆ, ಅಂಗಳದ ತುಂಬೆಲ್ಲಾ ಗಿಡಗಳದೇ ಪ್ರಪಂಚ!!

ಮಂಗಳೂರು: ಗಿಡ ಬೆಳೆಸುವ ಸಣ್ಣ ಹವ್ಯಾಸ ಇಂದು ದೊಡ್ಡದಾಗಿ ಬೆಳೆದು ಉದ್ಯಮವಾಗಿ, ರಾಜ್ಯ ಹೊರರಾಜ್ಯದ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ ಮಂಗಳೂರಿನ ಯುವಕ ಜ್ಞಾನ ಶೆಟ್ಟಿ ..
ಹೌದು ಮೂರು ವರ್ಷ ಕಾರ್ಪೊರೇಟ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಜ್ಞಾನ ಶೆಟ್ಟಿ ಈಗ ಕೆಲಸ ಬಿಟ್ಟು ಪೂರ್ಣ ಪ್ರಮಾಣದಲ್ಲಿ ನರ್ಸರಿಯಲ್ಲಿ ತೊಡಗಿದ್ದಾರೆ. ತಮ್ಮ ಮನೆಯನ್ನೇ ಮಿನಿ ಕಾಡಿನ ರೀತಿ ಬದಲಾಯಿಸಿ, ಹಸಿರು ಪ್ರಿಯರಿಗೆ ಸ್ವರ್ಗದಂತೆ ಕಾಣಿಸುವ ಹಾಗೆ, ಮಂಗಳೂರಿನ ಬಿಸಿಲಿನ ಧಗೆಯಲ್ಲೂ ತಂಪಾಗಿರುವಂತೆ ಬದಲಾಯಿಸಿದ್ದಾರೆ. ಜ್ಞಾನ ಶೆಟ್ಟಿಯ ಈ ಪ್ರಯತ್ನಕ್ಕೆ ತಾಯಿ ಶೋಭಾ ಅವರೇ ಸ್ಪೂರ್ತಿ..
ಹೌದು, ತಾಯಿ ಮಗ ಸೇರಿ ಮನೆಯಲ್ಲಿ 3 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಕಣ್ಣಿಗೆ ಹಬ್ಬದಂತಿರುವ ಬಣ್ಣಬಣ್ಣದ ಹೂಗಳ ಗಿಡದಿಂದ ಹಿಡಿದು, ಹಣ್ಣಿನ ಗಿಡಗಳು, ಅಲಂಕಾರಿಕ ಗಿಡಗಳು, ಬೋನ್ಸಾಯಿ ರೀತಿ ಸಣ್ಣದಾಗಿ ಬೆಳೆಯುವ ಗಿಡಗಳು, ಪಾಟ್‌ನೊಳಗೆ , ನೀರಿನೊಳಗೆ ಬೆಳೆಯುವ ವಿವಿಧ ವೈವಿದ್ಯಮಯವಾದ ಗಿಡಗಳನ್ನು ಜ್ಞಾನ ಶೆಟ್ಟಿ ಬೆಳೆದಿದ್ದಾರೆ. ಇನ್ನು ಇವುಗಳಿಗೆಲ್ಲ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ ಅನ್ನುವುದು ವಿಶೇಷ.. ಅಡುಗೆ ಮನೆಯ ಹಸಿಕಸವನ್ನೇ ಕಾಂಪೋಸ್ಟ್ ಮಾಡಿ ಬಳಸಲಾಗಿದ್ದು, ಕೆಮಿಕಲ್ ಮುಕ್ತವಾಗಿದೆ..


ಉದ್ಯಮವಾಗಿದ್ದು ಹೇಗೆ?

ಬೀಜ ಮೊಳಕೆ ಒಡೆದು, ಗಿಡಗಳು ನಳನಳಿಸಿ, ಬಣ್ಣದ ಹೂವುಗಳನ್ನು ಬಿಟ್ಟು, ಸೌಂದರ್ಯದಿಂದ ಕಂಗೊಳಿಸಿದಾಗ ಈ ಜನರೇಷನ್ ನ ಜ್ಞಾನ ಶೆಟ್ಟಿ , ಅವುಗಳ ಫೋಟೋ , ವಿಡಿಯೋ ಸೆರೆಹಿಡಿದು ಇನ್ ಸ್ಟಾಗ್ರಾಂ ನಲ್ಲಿ ಹಾಕತೊಡಗುತ್ತಾರೆ. ಇದನ್ನ ಗಮನಿಸಿದ ಸ್ನೇಹಿತ ವಲಯದವರು, ನಮಗೂ ಗಿಡ ಕೊಡಿ ಎಂದು ಒಬ್ಬೊಬ್ಬರಾಗಿಯೇ ಕೇಳಲು ತೊಡಗುತ್ತಾರೆ. ಗಿಡ ಪಡೆದ ಸ್ನೇಹಿತರೂ ಖುಷ್ ಆಗಿ, ಎಲ್ಲಾ ಕಡೆ ಪ್ರಚಾರವಾಗಿ, ವೆರೈಟಿ ಗಿಡಗಳಿಕೆ ಬೇಡಿಕೆ ಹೆಚ್ಚಾಗತೊಡಗುತ್ತದೆ. ಆಗ ಜ್ಞಾನ ಶೆಟ್ಟಿ ಅವರು 2022 ರಲ್ಲಿ ನರ್ಸರಿಗೆ "ನಮ್ಮ ಗಾರ್ಡನ್" ಎಂದು ಹೆಸರಿಟ್ಟು ಅಧಿಕೃತವಾಗಿ ಆನ್‌ಲೈನ್ ವ್ಯಾಪಾರ ಆರಂಭಿಸುತ್ತಾರೆ.

ಮನೆಯ ಟೆರೇಸ್, ಬಾಲ್ಕನಿ, ಪ್ಯಾಸೇಜ್, ಹಾಲ್, ಬೆಡ್‌ರೂಂ ನಲ್ಲಿಯೂ ಗಿಡ ಬೆಳೆಸಿ ನಂತರ ಮನೆ ಮುಂದೆ 7 ಸೆಂಟ್ಸ್ ಜಾಗದಲ್ಲೂ ಸುಂದರ ಗಿಡಗಳ ಲೋಕವನ್ನೇ ತೆರೆದಿದ್ದಾರೆ ಜ್ಞಾನ ಶೆಟ್ಟಿ. ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ಇತರ ಕಡೆಗಳಿಂದ ಹಸಿರು-ಗಿಡಗಳ ಪ್ರಿಯರು ಆರ್ಡರ್‌ ನೀಡಿ, ಗಿಡಪಡೆದ ಬಳಿಕ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಮನೆಗೆ ಮರಳಿದಾಗ ಜ್ಞಾನ ಶೆಟ್ಟಿ ಈ ತೋಟದ ಜವಾಬ್ದಾರಿಯನ್ನು ತೆಗೆದುಕೊಂಡು ಉದ್ಯಮವಾಗಿ ಈಗ ಬೆಳೆಸಿದ್ದಾರೆ. ಇದರ ಜೊತೆಗೆ ಮಕ್ಕಳು, ದೊಡ್ಡವರಿಗೆ ಗಿಡ ಬೆಳೆಸುವ ತರಬೇತಿಯನ್ನೂ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article