ಬೆಂಗಳೂರು :ಶಾಲೆಗಳ ಪುನರಾರಂಭಕ್ಕೂ ಕೊರೊನಾ ಕಂಟಕ; ಮಕ್ಕಳು, ಸಿಬ್ಬಂದಿ ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚನೆ..!!

ಬೆಂಗಳೂರು :ಇಡೀ ಜಗತ್ತನ್ನೇ ಬಿಟ್ಟೂ ಬಿಡದೆ ಕಾದಿದ್ದ ಮಹಾಮಾರಿ ಕೊರೊನಾ ಮತ್ತೆ ಮತ್ತೆ ಕರ್ನಾಟಕಕ್ಕೆ ಒಕ್ಕರಿಸಿದೆ. ಬೆಂಗಳೂರಿನಲ್ಲೇ 32 ಕೇಸ್ಗಳು ದೃಢಪಟ್ಟಿದ್ದು, ಇದೀಗ ಮತ್ತಿಬ್ಬರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ.
ಇದರ ನಡುವೆ ಮೇ 29 ರಿಂದ ಶಾಲಾ-ಕಾಲೇಜುಗಳು ಮರು ಆರಂಭವಾಗುತ್ತಿವೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ತಿಳಿಸಿದೆ.
ಮಕ್ಕಳಿಗೆ ಮಾಸ್ಕ್ ಧರಿಸಿ ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಶಾಲೆಗಳ ಆಡಳಿತ ಮಂಡಳಿ ಸೂಚನೆ ನೀಡುತ್ತಿವೆ. ಶಾಲಾ-ಕಾಲೇಜು ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದಾರೆ. ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೂ ಹಿಂದೇಟು ಹಾಕಬೇಡಿ. ಏನೇ ಕ್ರಮ ತೆಗೆದುಕೊಳ್ಳಬೇಕೆಂದರೂ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.