ಮುಂಬೈ :ಹೌಸ್ ಅರೆಸ್ಟ್ ರಿಯಾಲಿಟಿ ಶೋನಲ್ಲಿ ಲೈಂಗಿಕ ಭಂಗಿ ಪ್ರದರ್ಶನ; ಬ್ಯಾನ್ ಗೆ ಒತ್ತಾಯ.

ಮುಂಬೈ:ನಟ ಏಜಾಜ್ ಖಾನ್ ಅವರು ನಡೆಸಿಕೊಡುವ ‘ಹೌಸ್ ಅರೆಸ್ಟ್’ ರಿಯಾಲಿಟಿ ಶೋನಲ್ಲಿ ಲೈಂಗಿಕ ಭಂಗಿಗಳ ಪ್ರದರ್ಶನ ಮಾಡಲಾಗುತ್ತಿದೆ.
ಇದೀಗ ಈ ಆ್ಯಪ್ನಲ್ಲಿ ಪ್ರಸಾರ ಆಗುತ್ತಿರುವ ಕೆಲವು ಕಾರ್ಯಕ್ರಮಗಳು ಅಶ್ಲೀಲವಾಗಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಗ್ ಬಾಸ್ ರೀತಿಯೇ ‘ಹೌಸ್ ಅರೆಸ್ಟ್’ ಶೋ ನಡೆಸಲಾಗುತ್ತಿದೆ. ಇದರಲ್ಲಿ ಅನೇಕ ಯುವಕ-ಯುವತಿಯರು ಭಾಗವಹಿಸಿದ್ದಾರೆ. ಸಭ್ಯತೆಯ ಗಡಿ ಮೀರಿದ ಟಾಸ್ಕ್ಗಳನ್ನೇ ಈ ಶೋನಲ್ಲಿ ನೀಡಲಾಗುತ್ತಿದೆ. ಎಲ್ಲರ ಎದುರು ಬಟ್ಟೆ ಬಿಚ್ಚಿಸುವುದು, ಲೈಂಗಿಕ ಭಂಗಿಗಳನ್ನು ಪ್ರದರ್ಶಿಸುವುದು ಸೇರಿದಂತೆ ಅನೇಕ ಅಶ್ಲೀಲ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಹೀಗಾಗಿ ‘ಹೌಸ್ ಅರೆಸ್ಟ್’ ಶೋ ಬ್ಯಾನ್ ಆಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯಿಸಲಾಗುತ್ತಿದೆ.
ಮಾಹಿತಿ ಮತ್ತು ಪ್ರಸಾರ ಖಾತೆಯ ಬ್ಯಾನ್ನಿಂದ ಉಲ್ಲು ಆ್ಯಪ್, ಆಲ್ಟ್ ಬಾಲಾಜಿ ರೀತಿಯ ಒಟಿಟಿಗಳು ತಪ್ಪಿಸಿಕೊಂಡಿವೆ. ಈ ವಿಷಯವನ್ನು ಸಮಿತಿಯ ಗಮನಕ್ಕೆ ತಂದಿದ್ದೇನೆ. ಪ್ರತಿಕ್ರಿಯೆಯಾಗಿ ಕಾದಿದ್ದೇನೆ’ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.