ಸಕಲೇಶಪುರ: ಗ್ಯಾಸ್ ಗೋಡೌನ್ ಬಳಿ ಭೂಕುಸಿತ: ಬೇಲೂರು ಮಾರ್ಗ ಬಂದ್ ಸಾಧ್ಯತೆ.!!

ಸಕಲೇಶಪುರ: ಗ್ಯಾಸ್ ಗೋಡೌನ್ ಬಳಿ ಭೂಕುಸಿತ: ಬೇಲೂರು ಮಾರ್ಗ ಬಂದ್ ಸಾಧ್ಯತೆ.!!

ಹಾಸನ: ಸಕಲೇಶಪುರ ಪಟ್ಟಣದಲ್ಲಿ ಭಾರಿ ಆಗುತ್ತಿದ್ದು ಮಳೆಯ ಆರ್ಭಟಕ್ಕೆ ಸಕಲೇಶಪುರ ಪಟ್ಟಣದ ಅರೇಹಳ್ಳಿ ರಸ್ತೆಯಲ್ಲಿರುವ ಗ್ಯಾಸ್ ಗೋಡೌನ್ ಬಳಿ ಭೂಕುಸಿತ ಉಂಟಾಗಿದೆ.

ಎಡೆಬಿಡದೆ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಭಾರೀ ಮಳೆಗೆ ಸಕಲೇಶಪುರ ಪಟ್ಟಣದ ಅರೇಹಳ್ಳಿ ಗ್ಯಾಸ್ ಗೋಡೌನ್ ಬಳಿ ಕುಸಿತ ಉಂಟಾಗಿದೆ.

ಬೇಲೂರು- ಸಕಲೇಶಪುರ ರಾಜ್ಯ ಹೆದ್ದಾರಿಗೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದ್ದು, ಇದೇ ರೀತಿ ಮಳೆ ಹಾಗೂ ಭೂ ಕುಸಿತ ಮುಂದುವರಿದರೆ ವಾಹನ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ. ಮಣ್ಣಿನ ಜತೆ ಗಿಡ, ಮರಗಳು ನೆಲಕ್ಕುರುಳುತ್ತಿದ್ದು, ಆತಂಕದಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ.

NH 75ರಲ್ಲಿ ಮಣ್ಣು ತೆರವು ಕಾರ್ಯ: ಸಕಲೇಶಪುರ ತಾಲ್ಲೂಕಿನ, ಆನೆಮಹಲ್ ಬಳಿ ಭೂಕುಸಿತ ಪ್ರದೇಶಕ್ಕೆ ಎಸಿ ಶೃತಿ, ತಹಸೀಲ್ದಾರ್ ಅರವಿಂದ್ ಭೇಟಿ ನೀಡಿ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಹಾಸನ ಮಾರ್ಗವಾಗಿ ಬೆಂಗಳೂರು- ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯ ಎರಡು ಬದಿಗಳಲ್ಲೂ ವಾಹನಗಳನ್ನು ತಡೆದು ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕುಸಿಯುವ ಹಂತದಲ್ಲಿರುವ ಮಣ್ಣನ್ನು ಕೂಡ ಇಟಾಚಿ ಮೂಲಕ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.

Ads on article

Advertise in articles 1

advertising articles 2

Advertise under the article