ಬೆಂಗಳೂರು: ಮೊಳಗಲಿದೆ ಯುದ್ಧಕಾಲದ ಸೈರನ್: ಮಾಕ್ ಡ್ರಿಲ್ ಬಗ್ಗೆ ನಾವು ತಿಳಿದಿರಬೇಕಾದ ಮಾಹಿತಿ ಏನು? ದೇಶಾದ್ಯಂತ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಯುದ್ಧ ಸನ್ನಿವೇಶದ ಮಾಕ್ ಡ್ರಿಲ್ ಆಯೋಜಿಸುವಂತೆ ಕೇಂದ್ರ ಸರ್ಕಾರದ ಆದೇಶ..!!
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸೈರನ್‌ಗಳು ಮೊಳಗುತ್ತವೆ?
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
- ಸಿಕ್ಯುಎಎಲ್
- ಇಎಸ್ಐ ಆಸ್ಪತ್ರೆ
- ಎನ್ಎಎಲ್
- ಬೆಂಗಳೂರು ಡೈರಿ
- ಕೆನರಾ ಬ್ಯಾಂಕ್
- SRS ಪೀಣ್ಯ
- ವಿವಿ ಟವರ್ ಅಗ್ನಿಶಾಮಕ ಠಾಣೆ
- ಜ್ಞಾನಭಾರತಿ ಅಗ್ನಿಶಾಮಕ ಠಾಣೆ
- ಥಣಿಸಂದ್ರ ಅಗ್ನಿಶಾಮಕ ಠಾಣೆ
- ಬಾಣಸವಾಡಿ ಅಗ್ನಿಶಾಮಕ ಠಾಣೆ
- ಯಶವಂತಪುರ ಅಗ್ನಿಶಾಮಕ ಠಾಣೆ
- ಬನಶಂಕರಿ ಅಗ್ನಿಶಾಮಕ ಠಾಣೆ
- ರಾಜಾಜಿನಗರ ಅಗ್ನಿಶಾಮಕ ಠಾಣೆ
- ಚಾಮರಾಜಪೇಟೆ ಅಗ್ನಿಶಾಮಕ ಠಾಣೆ
- ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ
- ಹಲಸೂರು ಗೇಟ್ ಠಾಣೆ
- ಹಲಸೂರು ಪೊಲೀಸ್ ಠಾಣೆ
- ಉಪ್ಪಾರಪೇಟೆ ಪೊಲೀಸ್ ಠಾಣೆ
- ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ
- ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
- ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆ
- ವೈಯಾಲಿಕಾವಲ್ ಠಾಣೆ
- ಗೃಹರಕ್ಷಕದಳ ಕೇಂದ್ರ ಕಚೇರಿ, ಹಲಸೂರು
- ಪೀಣ್ಯ ಅಗ್ನಿಶಾಮಕ ಠಾಣೆ
- ಬೆಂಗಳೂರು ಗ್ರಾಮಾಂತರ ಗೃಹರಕ್ಷಕದಳ ಕಚೇರಿ
- ಬಾಗಲೂರು ಅಗ್ನಿಶಾಮಕ ಠಾಣೆ
- ಅಂಜನಾಪುರ ಅಗ್ನಿಶಾಮಕ ಠಾಣೆ
- ಐಟಿಪಿಎಲ್ ಅಗ್ನಿಶಾಮಕ ಠಾಣೆ
- ಸರ್ಜಾಪುರ ಅಗ್ನಿಶಾಮಕ ಠಾಣೆ
- ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ
- ಡೈರಿ ಸರ್ಕಲ್ ಅಗ್ನಿಶಾಮಕ ಠಾಣೆ
ಮಾಕ್ ಡ್ರಿಲ್ ಸಂದರ್ಭದಲ್ಲಿ ಏನೇನು ನಡೆಯುತ್ತದೆ?:
ಯುದ್ಧ ಸನ್ನಿವೇಶಗಳಲ್ಲಿ ಸ್ವಯಂರಕ್ಷಣೆಯ ಅರಿವು: ಮಾಕ್ ಡ್ರಿಲ್ ಮೂಲಕ ಇಂದಿನ ಪೀಳಿಗೆಯವರಿಗೆ ಯುದ್ಧ ಸನ್ನಿವೇಶಗಳಲ್ಲಿ ಶತ್ರುಗಳಿಂದ ಸ್ವಯಂ ರಕ್ಷಣೆ ಪಡೆಯುವುದರ ಕುರಿತ ತಿಳಿಸಲಾಗುತ್ತದೆ. ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಶತ್ರುಗಳಿಂದ ನಡೆಯಬಹುದಾದ ವಾಯು ದಾಳಿಯ ಸಾಧ್ಯತೆ ಮತ್ತು ಅದರ ಕುರಿತು ಸೈರನ್ ಮೊಳಗಿಸುವ ಮೂಲಕ ಮಾಹಿತಿ ನೀಡಲಾಗುತ್ತದೆ. ದಾಳಿ ವೇಳೆ ಸ್ವಯಂ ರಕ್ಷಣೆಯ ತರಬೇತಿ ನೀಡಲಾಗುತ್ತದೆ.
ವಿದ್ಯುತ್ ದೀಪಗಳು ಆಫ್: ವಾಯು ದಾಳಿಯಂತಹ ಸಂದರ್ಭಗಳಲ್ಲಿ ಶತ್ರುಗಳಿಗೆ ನಮ್ಮಲ್ಲಿನ ಜನಸಂಖ್ಯೆಯಿರುವ ಸ್ಥಳಗಳ ಗುರುತು ಸಿಗದಂತೆ ತಡೆಯಲು ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ದೀಪಗಳು ಸಂಪೂರ್ಣ ಬಂದ್ ಆಗಿರಲಿದೆ. ರಾತ್ರಿ ವಾಹನ ಸಂಚಾರ ಸ್ಥಗಿತವಾಗುತ್ತದೆ. ಅದರಂತೆ ಮಾಕ್ ಡ್ರಿಲ್ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿದ್ಯುತ್ ದೀಪಗಳು ಬಂದ್ ಆಗುತ್ತವೆ.
ಪ್ರಮುಖ ಸ್ಥಾವರಗಳ ಮರೆಮಾಚುವಿಕೆ: ಯುದ್ಧ ಸಂದರ್ಭದಲ್ಲಿ ದೇಶದ ಪ್ರಮುಖ ಸ್ಥಾವರಗಳನ್ನು ಶತ್ರುಗಳಿಂದ ಕಾಪಾಡುವುದು ಮುಖ್ಯ. ಅವುಗಳ ಮೇಲೆ ದಾಳಿ ಆಗದಂತೆ ಮರೆಮಾಚಿಕೊಳ್ಳಬೇಕಾದ ಅಗತ್ಯವಿರುವುದರಿಂದ ಈ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ರಕ್ಷಣಾ ಕಾರ್ಯಾಚರಣೆ ಕುರಿತು ತರಬೇತಿ: ಯುದ್ಧ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಯನ್ನು ಹೇಗೆ ಮಾಡಬೇಕು ಎಂಬುದರ ಕುರಿತು ಅಣಕು ಕಾರ್ಯಾಚರಣೆಯ ಮೂಲಕ ತಿಳಿಸಲಾಗುತ್ತದೆ.