ಕುಂದಾಪುರ:ಬಿಸಿ ಬಿಸಿ ಚರ್ಚೆ ನಡುವೆಯೇ ಗಂಡನ ಜತೆ ಚೈತ್ರಾ ಕುಂದಾಪುರ ದೇವಸ್ಥಾನಗಳಿಗೆ ಭೇಟಿ..!!

ಕುಂದಾಪುರ:ಬಿಸಿ ಬಿಸಿ ಚರ್ಚೆ ನಡುವೆಯೇ ಗಂಡನ ಜತೆ ಚೈತ್ರಾ ಕುಂದಾಪುರ ದೇವಸ್ಥಾನಗಳಿಗೆ ಭೇಟಿ..!!


 ಕುಂದಾಪುರ:ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಈಗ ಭಾರೀ ಸುದ್ದಿಯಲ್ಲಿದ್ದಾರೆ.

ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯ್ಕ್‌ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ತಂದೆಯ ಒಂದೊಂದು ಹೇಳಿಕೆಗೂ ಚೈತ್ರಾ ಕುಂದಾಪುರ ಕೂಡ ಕೌಂಟರ್‌ ಕೊಡುತ್ತಿದ್ದಾರೆ.

ಸದ್ಯ ಈ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿವೆ.

ಈ ಮಧ್ಯೆ ಪತಿ ಶ್ತೀಕಾಂತ್ ಕಶ್ಯಪ್ ಜತೆ ಚೈತ್ರಾ ಕುಂದಾಪುರ ಟೆಂಪಲ್‌ ರನ್‌ ಆರಂಭಿಸಿದ್ದಾರೆ.
ಬಿಗ್‌ ಬಾಸ್‌ʼ ಸ್ಪರ್ಧಿ ಹಾಗೂ ʻಫೈರ್‌ ಬ್ರ್ಯಾಂಡ್‌ʼ ಭಾಷಣಗಾರ್ತಿ ಎಂದೇ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರ ಮೇಲೆ ಹೆತ್ತ ತಂದೆಯೇ ಸಾಲು ಸಾಲು ಆರೋಪಗಳನ್ನು ಮಾಡುತ್ತಿರುವುದು ಭಾರೀ‌ ವಿವಾದವನ್ನೇ ಸೃಷ್ಟಿಸಿದೆ.

ಚೈತ್ರಾ ಕೂಡ ತಂದೆಯ ಆರೋಪಗಳಿಗೆ ಸೋಶಿಯಲ್‌ ಮೀಡಿಯಾ ಮೂಲಕವೇ ತಿರುಗೇಟು ಕೊಡುತ್ತಿದ್ದಾರೆ. ಹೀಗಾಗಿ ಈ ವಿಚಾರ ಸೊಶಿಯಲ್‌ ಮೀಡಿಯಾದಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ್‌ ಅವರು ಮಗಳ ವಂಚನೆ ಬಗ್ಗೆ ಎಳೆಎಳೆಯಾಗಿ ಮಾಧ್ಯಮಗಳ ಮುಂದೆ ಮಾಹಿತಿ ಬಿಚ್ಚಿಡುತ್ತಿದ್ದರೆ, ಅತ್ತ ಚೈತ್ರಾ ಕುಂದಾಪುರ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ತಂದೆಯ ಆರೋಪಗಳಿಗೆಲ್ಲಾ ಕೌಂಟರ್‌ ಕೊಡುತ್ತಿದ್ದಾರೆ.

ʻಎರಡು ಕ್ವಾಟರ್‌ ಕೊಟ್ರೆ ನಾನೇ ದೇವರುʼ ಎನ್ನುವ ಕುಡುಕ ತಂದೆ ಎಂದು ಚೈತ್ರಾ ಬರೆದುಕೊಂಡಿದ್ದರು. ಈ ಮಾತನ್ನು ʻಸಾಬೀತು ಮಾಡಲಿʼ ಎಂದು ಅವರ ತಂದೆ ಬಾಲಕೃಷ್ಣ ನಾಯ್ಕ್‌ ಚೈತ್ರಾಗೆ ಸವಾಲು ಹಾಕಿದ್ದಾರೆ.

ಈ ಬಿಸಿ-ಬಿಸಿ ಚರ್ಚೆ ಮಧ್ಯೆಯೇ ಗಂಡ ಶ್ರೀಕಾಂತ್‌ ಕಶ್ಯಪ್‌ ಜತೆ ಚೈತ್ರಾ ಕುಂದಾಪುರ ಪೊಳಲಿಯ ಅಮ್ಮ ರಾಜರಾಜೇಶ್ವರಿ ಮತ್ತು ಭದ್ರಕಾಳಿಯ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಫೋಟೋ ಕೆಳಗೆ, ಕಳೆದ ಶುಕ್ರವಾರ ಬ್ರಾಹ್ಮೀ ದುರ್ಗಾಪರಮೇಶ್ವರಿಯ ಸಾನ್ನಿಧ್ಯದಲ್ಲಿ ಸಪ್ತಪದಿ ತುಳಿದಿದ್ದೆವು. ಈ ಶುಭ ಶುಕ್ರವಾರ ಪೊಳಲಿಯ ಅಮ್ಮ ರಾಜರಾಜೇಶ್ವರಿ ಮತ್ತು ಭದ್ರಕಾಳಿಯ ಪುಣ್ಯ ಕ್ಷೇತ್ರದಲ್ಲಿ ಜತೆಯಾಗಿ.. ಖುಷಿಯಾಗಿ..” ಎಂದು ಕ್ಯಾಪ್ಶನ್‌ ಬರೆದುಕೊಂಡಿದ್ದಾರೆ.

ಇಷ್ಟೆಲ್ಲ ವಿವಾದಕ್ಕೊಳಗಾಗಿದ್ದರೂ ಚೈತ್ರಾ ಮೇಲೆ ಅವರ ಅಭಿಮಾನಿಗಳ ಪ್ರೀತಿ ಕಡಿಮೆಯಾಗಿಲ್ಲ. ಇಷ್ಟು ದಿನ ಪಟ್ಟ ಕಷ್ಟಗಳು ಕೊನೆಯಾಗಲಿ. ಮುಂದಿನ ನಿಮ್ಮ ಜೀವನದಲ್ಲಿ ಸದಾ ನಗುವೇ ತುಂಬಿರಲಿ. ನವ ಜೋಡಿ ಹೀಗೆ ನೂರ್ಕಾಲ ಸುಖವಾಗಿ ಬಾಳಿ ಎಂದೆಲ್ಲಾ ಫ್ಯಾನ್ಸ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article