ಉತ್ತರ ಪ್ರದೇಶ :ವಿಪರೀತ ಮಳೆಯ ಪ್ರಭಾವ ;ರಭಸವಾದ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ..!!
Sunday, May 25, 2025

ಉತ್ತರ ಪ್ರದೇಶ: ಮಳೆಯ ಹೊಡೆತಕ್ಕೆ ಅಪಾರ ಸಂಖ್ಯೆಯಲ್ಲಿ ಗಿಳಿಗಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
70ಕ್ಕೂ ಹೆಚ್ಚು ಗಿಳಿಗಳು ಸಾವನ್ನಪ್ಪಿವೆ, 50ಕ್ಕೂ ಹೆಚ್ಚು ಗಿಳಿಗಳಿಗೆ ಗಾಯವಾಗಿದೆ. ಅವುಗಳನ್ನು ತಕ್ಷಣವೇ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೇ 22ರ ರಾತ್ರಿ ಝಾನ್ಸಿ ಜಿಲ್ಲೆಯ ಕೆಲವು ಭಾಗಗಳನ್ನು ಅಪ್ಪಳಿಸಿದ ಭಾರೀ ಬಿರುಗಾಳಿಯಿಂದಾಗಿ ಅನೇಕರು ಗಾಯಗೊಂಡಿದ್ದಾರೆ. ಸತ್ತ ಗಿಳಿಗಳ ನಿಖರ ಸಂಖ್ಯೆ ನೂರಾರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಜಿಲ್ಲೆಯ ಬಾಮೋರ್ ಬ್ಲಾಕ್ ಅಡಿಯಲ್ಲಿ ಬರುವ ಸಿಂಘಾರ್ ಗ್ರಾಮದ ದೇವಾಲಯದ ಬಳಿಯ ದೊಡ್ಡ ಹಳೆಯ ಮರದಲ್ಲಿ ನೂರಾರು ಗಿಳಿಗಳು ವಾಸಿಸುತ್ತಿವೆ. ಅವು ಬಿರುಗಾಳಿಯ ಹೊಡೆತಕ್ಕೆ ಸತ್ತು ಹೋಗಿವೆ.