ಕೊಚ್ಚಿ :ಕೊಚ್ಚಿ ಬಳಿಯಲ್ಲಿ ಬೃಹತ್ ಕಂಟೇನರ್ ಹಡಗು ಮುಳುಗಡೆ ; 640 ಕಂಟೇನರ್, 80 ಟನ್ ಡೀಸೆಲ್ ಸಮುದ್ರಪಾಲು, 24 ಸಿಬಂದಿಯ ರಕ್ಷಣೆ, ಅತ್ಯಂತ ಮಾಲಿನ್ಯಕಾರಕ ರಾಸಾಯನಿಕ ಬಗ್ಗೆ ಮೀನುಗಾರರಿಗೆ ಆತಂಕ..!!

ಕೊಚ್ಚಿ :ಕೊಚ್ಚಿ ಬಳಿಯಲ್ಲಿ ಬೃಹತ್ ಕಂಟೇನರ್ ಹಡಗು ಮುಳುಗಡೆ ; 640 ಕಂಟೇನರ್, 80 ಟನ್ ಡೀಸೆಲ್ ಸಮುದ್ರಪಾಲು, 24 ಸಿಬಂದಿಯ ರಕ್ಷಣೆ, ಅತ್ಯಂತ ಮಾಲಿನ್ಯಕಾರಕ ರಾಸಾಯನಿಕ ಬಗ್ಗೆ ಮೀನುಗಾರರಿಗೆ ಆತಂಕ..!!


ಕೊಚ್ಚಿ: ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲುಪಡೆಯ ಪ್ರಯತ್ನ ಹೊರತಾಗಿಯೂ ಕೊಚ್ಚಿ ಬಳಿಯ ಸಮುದ್ರ ಮಧ್ಯದಲ್ಲಿ ಬೃಹತ್ ಕಂಟೇನರ್ ಹಡಗೊಂದು ಮುಳುಗಡೆಯಾಗಿದೆ. ಕೋಸ್ಟ್ ಗಾರ್ಡ್ ಹಡಗು ICGS ಸಕ್ಷಮ್ ಮೂಲಕ ಹಡಗಿನ ರಕ್ಷಣೆಗಾಗಿ ಮತ್ತು ತೈಲ ಸೋರಿಕೆಯನ್ನು ನಿಯಂತ್ರಿಸಲು ಪ್ರಯತ್ನ ನಡೆಸಿತ್ತು. ಸರಕುಗಳನ್ನು ಹೊಂದಿದ್ದ ಕಂಟೇನರ್‌ ಹಡಗು ಶನಿವಾರ ಮಧ್ಯಾಹ್ನದ ವೇಳೆಗೆ 26 ಡಿಗ್ರಿಗಳಷ್ಟು ವಾಲಿತ್ತು. 

ಹಡಗಿನಲ್ಲಿ 24 ಮಂದಿ ಸಿಬ್ಬಂದಿ ಇದ್ದರು. ಈ ಪೈಕಿ 21 ಜನರನ್ನು ನಿನ್ನೆ ಸಂಜೆ ಕರಾವಳಿ ಕಾವಲು ಪಡೆ ರಕ್ಷಿಸಿತ್ತು. ಹಡಗು ಮುಳುಗಲು ಪ್ರಾರಂಭಿಸುತ್ತಿದ್ದಂತೆ ನೌಕಾಪಡೆ ಉಳಿದ ಮೂವರನ್ನು ಇಂದು ಬೆಳಗ್ಗೆ ರಕ್ಷಿಸಿ ಸ್ಥಳಾಂತರಿಸಿತು.‌ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಕೊಚ್ಚಿಯ ಕೋಸ್ಟ್ ಗಾರ್ಡ್ ಪ್ರಧಾನ ಕಚೇರಿಗೆ ಸ್ಥಳಾಂತರಿಸಿದ್ದು, ಕ್ಯಾಪ್ಟನ್ ಮತ್ತು ಇಬ್ಬರು ಎಂಜಿನಿಯರ್‌ಗಳನ್ನು ಕೊಚ್ಚಿ ನೌಕಾ ನೆಲೆಗೆ ಕರೆದೊಯ್ಯಲಾಗಿದೆ. ಮಾಹಿತಿ ಪ್ರಕಾರ, ಹಡಗು 640 ಕಂಟೇನರ್‌ ಗಳನ್ನು ಹೊತ್ತೊಯ್ಯುತ್ತಿತ್ತು. ಅಲ್ಲದೆ, 13 ಕಂಟೇನರ್ ಗಳಲ್ಲಿ ಅತ್ಯಂತ ಕಲುಷಿತ ರಾಸಾಯನಿಕಗಳಿದ್ದವು. 84 ಟನ್ ಡೀಸೆಲ್ ಹಾಗೂ 367 ಮೆಟ್ರಿಕ್ ಟನ್ ಫರ್ನೆನ್ಸ್ ಆಯಿಲ್ ಇತ್ತು. ಮಳೆ ಮತ್ತು ಪ್ರವಾಹದಿಂದಾಗಿ ಅವುಗಳೀಗ ಕೇರಳ ಕರಾವಳಿ ಕಡೆಗೆ ಚಲಿಸುವ ಸಾಧ್ಯತೆಯಿದೆ‌.‌ ಕಡಲ ತೀರ ಮಾಲಿನ್ಯಗೊಳ್ಳುವ ಸಾಧ್ಯತೆ ಇರುವುದರಿಂದ ಮೀನುಗಾರರು ಆತಂಕಗೊಂಡಿದ್ದು ಕೇರಳ‌ ಸರ್ಕಾರ ಮುನ್ನೆಚ್ಚರಿಕೆಯನ್ನೂ ವಹಿಸಿದೆ. 

1997 ರಲ್ಲಿ ನಿರ್ಮಿಸಲಾದ ಲೈಬೀರಿಯಾ ಮೂಲದ ಕಂಟೇನರ್ ಹಡಗು MSC ಎಲ್ಸಾ, 184 ಮೀಟರ್ ಉದ್ದ ಮತ್ತು 25.3 ಮೀಟರ್ ಅಗಲವಾಗಿತ್ತು. ತಾಂತ್ರಿಕ ತಜ್ಞರನ್ನು ಹೊತ್ತ ಹಡಗನ್ನು ರಕ್ಷಣಾ ಕಾರ್ಯಾಚರಣೆಗಾಗಿ ಕಳುಹಿಸಲಾಗಿತ್ತು, ಆದರೆ ಸರಕುಗಳನ್ನು ಸ್ಥಳಾಂತರಿಸಲು ಅಥವಾ ಹಡಗನ್ನು ಎಳೆದು ತರಲು ಸಾಧ್ಯವಾಗಲಿಲ್ಲ. ಹೀಗಾಗಿ ನೌಕಾಪಡೆಯು ರಕ್ಷಣಾ ಕಾರ್ಯಾಚರಣೆ ಕೈಬಿಟ್ಟಿದೆ.

Ads on article

Advertise in articles 1

advertising articles 2

Advertise under the article