ಬೆಂಗಳೂರು :ಇಂದಿನಿಂದ ಮದ್ಯದ ದರ 15 ರೂ ನಷ್ಟು ಹೆಚ್ಚಳ..!!!

ಬೆಂಗಳೂರು :ಇಂದಿನಿಂದ ಮದ್ಯದ ದರ 15 ರೂ ನಷ್ಟು ಹೆಚ್ಚಳ..!!!

ಬೆಂಗಳೂರು : ಇಂದಿನಿಂದ ಮದ್ಯದ ದರ ಹೆಚ್ಚಳವಾಗಲಿದೆ. ಭಾರತೀಯ ಮದ್ಯಗಳ ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಮೇ 15ರ ಗುರುವಾರದಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಮದ್ಯದ ಮೇಲಿನ ಸುಂಕ ಪರಿಷ್ಕರಣೆ ಮತ್ತು ತೆರಿಗೆ ಸ್ಲ್ಯಾಬ್ ಗಳ ಬದಲಾವಣೆಗಾಗಿ ಆರ್ಥಿಕ ಇಲಾಖೆಯು ಕರ್ನಾಟಕ ಅಬಕಾರಿ(ಅಬಕಾರಿ ಸುಂಕ ಮತ್ತು ಶುಲ್ಕ) ಎರಡನೇ ತಿದ್ದುಪಡಿ ನಿಯಮಗಳು- 2025ರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಭಾರತೀಯ ಮದ್ಯಗಳ ತೆರಿಗೆ ಸ್ಲ್ಯಾಬ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳದಿಂದ ಕಡಿಮೆ ದರದಲ್ಲಿ ಸಿಗುತ್ತಿದ್ದ ಬ್ರ್ಯಾಂಡಿ, ವಿಸ್ಕಿ, ಜಿನ್, ರಮ್ ಗಳ ಬೆಲೆ ರಾಜ್ಯದಲ್ಲಿ ಇನ್ನು ಮತ್ತಷ್ಟು ದುಬಾರಿಯಾಗಲಿದೆ. 180 ಎಂಎಲ್ ಬಾಟಲಿ ಮತ್ತು ಸ್ಯಾಷೆಗಳ ಬೆಲೆಯಲ್ಲಿ ಗರಿಷ್ಠ 15 ರೂಪಾಯಿ ಏರಿಕೆಯಾಗಲಿದೆ.


Ads on article

Advertise in articles 1

advertising articles 2

Advertise under the article