ನವದೆಹಲಿ :ಅಪ್ರಾಪ್ತೆಯರಿಗೆ ಇಂಜೆಕ್ಷನ್, ಕಾಂಡೊಮ್ ಇಲ್ಲದೆ 15-20 ಮಂದಿ ಜತೆ ದೈಹಿಕ ಸಂಪರ್ಕ…!!! ಇದು ದಿಲ್ಲಿ ರೆಡ್ ಲೈಟ್ ಏರಿಯಾ ಹೆಣ್ಮಕ್ಕಳ ವ್ಯಥೆ..!!

ನವದೆಹಲಿ: ಇಲ್ಲಿನ ಜಿಬಿ ರಸ್ತೆಯಂತಹ ರೆಡ್ ಲೈಟ್ ಏರಿಯಾದಲ್ಲಿ ನಡೆಯುವ ಘಟನೆಗಳು ಮೈ ಝುಮ್ಮೆನಿಸುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ರೆಡ್ ಲೈಟ್ ಏರಿಯಾದಲ್ಲಿ ನಡೆಯುವ ಘಟನೆಗಳ ವಿಡಿಯೋವೊಂದು ವೈರಲ್ ಆಗಿದ್ದು, ಜಿಬಿ ರಸ್ತೆಯ ಕರಾಳ ಸತ್ಯ ಬಯಲಾಗಿದೆ.
ಟ್ರೂ ಟಾಕ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಎಕ್ಸ್ ಖಾತೆಯಲ್ಲಿ ವಿಡಿಯೋ ತುಣುಕನ್ನು ಬಳಕೆದಾರರು ಹಂಚಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಅತುಲ್ ಶರ್ಮಾ, ಜಿ ಬಿ ರೋಡ್ ಕರಾಳ ಕಥೆಯನ್ನು ಚಾನೆಲ್‌ನಲ್ಲಿ ಹೇಳಿದ್ದಾರೆ.
ದ್ವೇಷದ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಹುಡುಗಿಯರನ್ನು ಅಪಹರಿಸಿ ದೇಹ ವ್ಯಾಪಾರಕ್ಕೆ ತಳ್ಳಲಾಗುತ್ತದೆ. ಮಾರುಕಟ್ಟೆಯಲ್ಲಿ ಅಪ್ರಾಪ್ತ ಹುಡುಗಿಯರಿಗೆ ಬೇಡಿಕೆ ಹೆಚ್ಚಾಗಿರೋದು ಇದಕ್ಕೆ ಮುಖ್ಯ ಕಾರಣ. ಅಲ್ಲಿಗೆ ಬಂದ ಹುಡುಗಿಯರು ತಮ್ಮ ದೇಹವನ್ನು ಪ್ರದರ್ಶಿಸಬೇಕು. ಹಾಗಾಗಿ ಅವರನ್ನು ಕಿಟಕಿ ಬಳಿ ಅವರ ಎದೆ ಕಾಣುವಂತೆ ನಿಲ್ಲಿಸಲಾಗುತ್ತದೆ. ಎದೆ ಮಾತ್ರ ಇಲ್ಲಿ ಮುಖ್ಯ.
ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಆಕ್ಸಿಟೋಸಿನ್ ಇಂಜೆಕ್ಷನ್ ನೀಡಿ, ಅವರ ದೇಹದ ಭಾಗಗಳ ಗಾತ್ರ ಹೆಚ್ಚಿಸಲಾಗುತ್ತದೆ. ಇದರಿಂದ ಅಪ್ರಾಪ್ತ ಹುಡುಗಿಯರು ಯುವತಿಯರಂತೆ ಕಾಣಿಸುತ್ತಾರೆ.
ಪ್ರತಿದಿನ 15 ರಿಂದ 20 ಗ್ರಾಹಕರ ಜೊತೆ ಒಂದು ದಿನ ಸಂಬಂಧ ಬೆಳೆಸಬೇಕು. ಸುಂದರವಾದ ಹುಡುಗಿಯರನ್ನು ಅನೇಕ ಬಾರಿ, ಕೆಟ್ಟವಾಸನೆ ಬರುವ, ಯಾರೂ ನೋಡಲು ಇಚ್ಛಿಸಿದ, ಕೊಳಕು ವ್ಯಕ್ತಿ ಬಳಿ ಕಳುಹಿಸಿ ಹಿಂಸೆ ನೀಡೋದಿದೆ.
ಕಾಂಡೋಮ್ ಕೊಡಲ್ಲ:
ಜೆ.ಬಿ. ರಸ್ತೆಯಲ್ಲಿ ಇನ್ನೊಂದು ನಿಯಮ ಇದೆ. ಅಪ್ರಾಪ್ತ ಹುಡುಗಿಯನ್ನು ಈ ದಂಧೆಗೆ ತಳ್ಳುವವರು, ಸೆಕ್ಸ್ ವರ್ಕರ್ಸ್ ಮಕ್ಕಳನ್ನು ಮಾರಾಟ ಮಾಡಿ ಹಣ ಮಾಡಲು ಬಯಸುತ್ತಾರೆ. ಹೀಗಾಗಿ, ಆರಂಭದಲ್ಲಿ ಹುಡುಗಿಗೆ ಕಾಂಡೋಮ್ ನೀಡೋದಿಲ್ಲ. ಆಕೆ ಗರ್ಭ ಧರಿಸಿ ಒಂದು ಮಗು ಹೆತ್ತ ಮೇಲೆ ಕಾಂಡೋಮ್ ನೀಡಲಾಗುತ್ತದೆ.
ಹೆತ್ತ ಅಮ್ಮನಿಗೆ ಮಕ್ಕಳನ್ನು ನೋಡುವ ಭಾಗ್ಯವೂ ಇರುವುದಿಲ್ಲ. ಮಗು ನೋಡ್ಬೇಕು ಅಂದ್ರೆ ಮಾಲೀಕರಿಗೆ ಪ್ರತಿ ಬಾರಿ 200 ರೂಪಾಯಿ ನೀಡ್ಬೇಕು ಎನ್ನುತ್ತಾರೆ ಅತುಲ್ ಶರ್ಮಾ.
ಜಿಬಿ ರಸ್ತೆಯ ರೆಡ್ ಲೈಟ್ ಏರಿಯಾದಲ್ಲಿರುವ ಲೈಂಗಿಕ ಕಾರ್ಯಕರ್ತೆಯರು ಕೆಟ್ಟ ವಾತಾವರಣದಲ್ಲಿ ಆಹಾರ ಸೇವನೆ ಮಾಡುತ್ತಾರೆ. ಇಷ್ಟಾದರೂ, ಈಗಿನ ದಿನಗಳಲ್ಲಿ ಅನೇಕ ಹುಡುಗಿಯರು ತಮ್ಮ ಇಚ್ಛೆಯಿಂದಲೇ ಈ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ದುಬಾರಿ ಫೋನ್, ಐಷಾರಾಮಿ ಜೀವನ ನಡೆಸಲು ಕೆಲವರು ಈ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿರುವುದು ತುಂಬಾ ನೋವಿನ ಸಂಗತಿ ಎಂದು ಅತುಲ್ ಶರ್ಮಾ ಹೇಳಿದ್ದಾರೆ.