ವಿಜಯನಗರ : ಉತ್ಸವದಿಂದ ಮರಳುತ್ತಿದ್ದ ಮಹಿಳೆ ಮೇಲೆ ಬಸ್ಸಿನಲ್ಲೇ ಗ್ಯಾಂಗ್ ರೇಪ್;ಆರೋಪಿಗಳ ಬಂಧನ.

ವಿಜಯನಗರ : ಹರಪ್ಪನಹಳ್ಳಿಯ ಉಚ್ಚಂಗಿ ದುರ್ಗದ ಉತ್ಸವಾಂಬಾ ದೇವಿಯ ದರ್ಶನ ಮುಗಿಸಿ ವಾಪಸ್ ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳು ಬಸ್ಸಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಇದೀಗ ಬಸ್ ಚಾಲಕ, ನಿರ್ವಾಹಕ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಟ್ಟೂರು ತಾಲೂಕಿನ ಅಳಬೂರಿನ ಖಾಸಗಿ ಬಸ್ ಚಾಲಕ ಪ್ರಕಾಶ್ ಮಡಿವಾಳ, ಹರಪ್ಪನ ಹಳ್ಳಿಯ ಕಂಡಕ್ಟರ್ ರಾಜಶೇಖರ, ಹಾಗೂ ಅರಸೀಕೆರೆ ಗ್ರಾಮದ ಬಸ್ ಏಜೆಂಟ್ ಸುರೇಶ್ ಎಂಬುವವರು ಒಂಟಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಗಳು.
ದಾವಣಗೆರೆ ಜಿಲ್ಲೆಯ ಜರೆಕಟ್ಟೆ ಗ್ರಾಮದ ಮಹಿಳೆ ಯುಗಾದಿ ನಿಮಿತ್ತ ಉತ್ಸವಾಂಬಾ ದೇವಿಯ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ದೇವಿಯ ದರ್ಶನ ಮುಗಿಸಿ ವಾಪಸ್ ತಮ್ಮ ಊರಿಗೆ ಮರಳಲೆಂದು ರಾತ್ರಿ 8.45 ರ ಖಾಸಗಿ ಬಸ್ ಹತ್ತಿದರು.
ಕೆಲ ದೂರ ಬಸ್ ಸಾಗಿದ ಬಳಿಕ ಬಸ್ ನಲ್ಲಿದ್ದ ಪ್ರಯಾಣಿಕರು ಇಳಿಯುತ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.