White Rice ವೈಟ್ ಅಕ್ಕಿ ಬಳಕೆ ಮಾಡ್ತಿದ್ರೆ ಹುಷಾರ್: ಜಯದೇವ ಆಸ್ಪತ್ರೆಯಿಂದ ಶಾಕಿಂಗ್ ವರದಿ

ಪ್ರತಿದಿನ ಅನ್ನ ತಿನ್ನುವ ಅಭ್ಯಾಸ ಹೊಂದಿರುವವರಲ್ಲಿ ನೀವೂ ಒಬ್ಬರಾಗಿದ್ದರೆ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರವಿರಲೇಬೇಕು. ಯಾಕೆಂದರೆ ಪ್ರತಿದಿನ ಅನ್ನ ತಿನ್ನುವುದು ಕೂಡ ಅಪಾಯ. ಇದರಿಂದ ಕೆಲವು ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ಜಯದೇವ ಆಸ್ಪತ್ರೆಯಿಂದ ಶಾಕಿಂಗ್ ವರದಿಯೊಂದು ಹೊರಬಿದ್ದಿದ್ದು, ಈ ವರದಿ ಪ್ರಕಾರ, ವೈಟ್ ಪಾಲಿಶ್ ರೈಸ್ ಸೇವನೆನಿಂದ ಮಕ್ಕಳಲ್ಲಿ ಹೃದಯ ಸಂಬಂಧಿ ಖಾಯಿಲೆ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.
ವೈಟ್ ರೈಸ್ ಸೇವನೆಯಿಂದ ನಿಮ್ಮ ಜೀವಕ್ಕೆ ಆಪತ್ತು. ಈ ರೈಸ್ ಸೇವನೆಯಿಂದ ಹೃದಯ ಸಮಸ್ಯೆ ಖಾಯಿಲೆ ಉಲ್ಬಣ ಆಗುತ್ತದೆ ಎಂದು ಹೃದ್ರೋಗ ತಜ್ಞರಿಂದ ವೈಟ್ ಅಕ್ಕಿ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳಲ್ಲಿ ಹೃದಯ ಸಂಬಂಧಿ ಖಾಯಿಲೆ ಹೆಚ್ಚಾಗಲು ಈ ವೈಟ್ ಪಾಲಿಷ್ ಅಕ್ಕಿಯೇ ಕಾರಣವಾಗಿದೆ. ವೈದ್ಯರು 400 ಮಕ್ಕಳನ್ನ ಪರೀಕ್ಷೆಗೆ ಒಳಪಡಿಸಿದ್ದರು. ಆ ಎಲ್ಲ ಮಕ್ಕಳಲ್ಲೂ ವೈಟ್ ರೈಸ್ ಸೇವನೆಯಿಂದಲೇ ಹೃದಯ ಸಂಬಂಧಿ ಖಾಯಿಲೆ ಇರೋದು ಧೃಢವಾಗಿದೆ. ಇದರ ಬೆನ್ನಲ್ಲೇ ವೈಟ್ ಪಾಲಿಷ್ ರೈಸ್ ಬಳಸದಂತೆ ಹೃದ್ರೋಗ ತಜ್ಞರು ತಿಳಿಸಿದ್ದಾರೆ.
ವೈಟ್ ರೈಸ್‌ನಲ್ಲಿ ಪೋಷಕಾಂಶಗಳು ಕಡಿಮೆ ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುತ್ತವೆ. ಇವು ಹೃದಯದ ಆರೋಗ್ಯವನ್ನು ನಿಧಾನವಾಗಿ ಹಾನಿಗೊಳಿಸಬಹುದು. ಅನ್ನವನ್ನು ನಿರಂತರವಾಗಿ ತಿನ್ನುವುದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.