ಉತ್ತರ ಪ್ರದೇಶ:ಕ್ಯಾಂಪಸ್ ನಲ್ಲಿ ಸಿಡಿಲು ಬಡಿದು ಕುಸಿದು ಬಿದ್ದ ಐವರು ವಿದ್ಯಾರ್ಥಿಗಳು.
Saturday, April 12, 2025

ಉತ್ತರ ಪ್ರದೇಶ: ಮೊರಾದಾಬಾದ್ನಲ್ಲಿ ತೀರ್ಥಂಕರ್ ಮಹಾವೀರ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಿಡಿಲು ಬಡಿದು ಐವರು ವಿದ್ಯಾರ್ಥಿಗಳು ಕುಸಿದು ಬಿದ್ದಿದ್ದು, ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದರು.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭಯಾನಕ ವೀಡಿಯೊ ಆನ್ ಲೈನ್ ನಲ್ಲಿಯೂ ಕಾಣಿಸಿಕೊಂಡಿದೆ.ಸಿಡಿಲು ಬಡಿದ ತಕ್ಷಣ ಐದು ವಿದ್ಯಾರ್ಥಿಗಳಲ್ಲಿ ನಾಲ್ವರು ಕುಸಿದುಬಿದ್ದಿರುವುದನ್ನು ಕಾಣಬಹುದು. ಅಷ್ಟರಲ್ಲಿ ಒಬ್ಬ ವಿದ್ಯಾರ್ಥಿ ಎದ್ದು ಸ್ಥಳದಿಂದ ಓಡಿಹೋದನು. ವಿದ್ಯಾರ್ಥಿಗಳಿಗೆ ಸುಟ್ಟ ಗಾಯಗಳಾಗಿವೆ.