ಗದಗ :ಕಪ್ಪಾಗಿದ್ದಾಳೆ ಎಂದು ಕಿರುಕುಳ ಕೊಟ್ಟ ಅತ್ತೆ;ಮನ ನೊಂದು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ
Saturday, April 19, 2025
ಗದಗ: ವರ್ಣಭೇದಕ್ಕೆ ಬೇಸತ್ತ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗನಲ್ಲಿ ನಡೆದಿದೆ. ನನ್ನ ಸಾವಿಗೆ ಅತ್ತೆ ಹಾಗೂ ಭಾವನೇ ಕಾರಣ ಅಂತ ಡೆತ್ ನೋಟ್ ಬರೆದಿಟ್ಟಿದ್ದು, ಇದೀಗ ಕಿರುಕುಳ ನೀಡದ ಅತ್ತೆ ಹಾಗೂ ಭಾವ ಜೈಲು ಸೇರಿದ್ದಾರೆ.
ಗದಗನ ಬೆಟಗೇರಿಯ ಶರಣಬಸವೇಶ್ವರ ನಗರದ ನಿವಾಸಿಯಾದ ಅಮರೇಶ್ ಹಾಗೂ ಬಳ್ಳಾರಿ ಮೂಲದ ಪೂಜಾ ಜೊತೆಗೆ ನಾಲ್ಕು ತಿಂಗಳ ಹಿಂದೆ ಅದ್ದೂರಿಯಾಗಿ ಮದುವೆಯಾಗಿತ್ತು. ಆದರೆ ಮದುವೆಯಾದ ಹೊಸದರಲ್ಲಿ ಅತ್ತೆ ಶಶಿಕಲಾ ಹಾಗೂ ಭಾವ ವೀರನಗೌಡ ನೀನು ಕಪ್ಪಾಗಿದ್ದಿಯಾ, ನಮ್ಮ ಅಮರೇಶನಿಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗುತ್ತಿದ್ದಳು ಎಂದು ಕಿರುಕುಳ ನೀಡಿದ್ರಂತೆ. ಹೀಗಾಗಿ ಪದೇ ಪದೇ ಈ ರೀತಿಯ ವರ್ಣಭೇದ ಹಿಂಸೆ ತಾಳದೇ ಮನನೊಂದ ಪೂಜಾ ಏಪ್ರಿಲ್ 15 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಅತ್ತೆ ಶಶಿಕಲಾ ಹಾಗೂ ಭಾವ ವೀರನಗೌಡರನ್ನು ಬಂಧಿಸಲಾಗಿದೆ. ಈ ಸಂಬಂಧ ಗದಗ ಪೊಲೀಸ್ ಠಾಣೆಯಲ್ಲೆ ಪ್ರಕರಣ ದಾಖಲಾಗಿದೆ.