ಬೆಂಗಳೂರು :ಮಾರಕಾಸ್ತ್ರಗಳಿಂದ ಕೊಚ್ಚಿ ಮಂಗಳಮುಖಿಯ ಬರ್ಬರ ಹತ್ಯೆ; ಕೋಟಿ ಕೋಟಿ ಆಸ್ತಿಗಾಗಿ ಗಂಡನೇ ಕೊಲೆ ಮಾಡಿರುವ ಶಂಕೆ..!!
Sunday, April 20, 2025

ಬೆಂಗಳೂರು : ಮಂಗಳಮುಖಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಬೆಂಗಳೂರಿನ ಕೆಆರ್ ಪುರಂ ನ ಬಸವೇಶ್ವರ ನಗರದ ಗಾಯತ್ರಿ ಲೇಔಟ್‌ನ ಮನೆಯೊಂದರಲ್ಲಿ ನಡೆದಿದೆ.
ಮಂಗಳಮುಖಿ ತನುಶ್ರೀ (40) ಎಂಬುವವರ ಹತ್ಯೆಯಾಗಿದ್ದು, ಅವರು ಕರವೇ ಕಾರ್ಯಕರ್ತೆಯೂ ಆಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಮೂರು ತಿಂಗಳ ಹಿಂದೆಯೇ ಜಗನ್ನಾಥ್ ಎಂಬುವವರ ಜೊತೆ ತನುಶ್ರೀ ಮದುವೆಯಾಗಿದ್ದರು. ಮೂರು ದಿನಗಳ ಹಿಂದೆಯೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪತಿ ಜಗನ್ನಾಥ್ ಹಾಗೂ ಮನೆಗೆಲಸದಾಕೆ ಪರಾರಿಯಾಗಿದ್ದಾರೆ.
ಕೋಟಿ-ಕೋಟಿ ಆಸ್ತಿ ಹೊಂದಿದ್ದ ತನುಶ್ರೀ ಆಸ್ತಿಗಾಗಿಯೇ ಆಕೆಯ ಕೊಲೆಯನ್ನು ಗಂಡನೆ ಮಾಡಿದ್ದಾನೆಂಬ ಅನುಮಾನ ಮೂಡಿದೆ. ಕೊಲೆಯಾದ ತನುಶ್ರೀ ಸಂಗಮ ಎಂಬ ಎನ್‌ಜಿಒ ಸಹ ನಡೆಸುತ್ತಿದ್ದರು. ಸ್ಥಳಕ್ಕೆ ಕೆಆರ್ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.