ಇಸ್ಲಾಮಬಾದ್ :ಪಾಕಿಸ್ತಾನದಲ್ಲಿ ಗಗನಕ್ಕೇರಿದ ಚಿಕನ್, ಮೊಟ್ಟೆ, ಅಕ್ಕಿ ಬೆಲೆ : ಭಾರತದ ಹೊಡೆತಕ್ಕೆ ಪಾಕ್ ತತ್ತರ.

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇಸ್ಲಾಮಿಕ್ ಮತಾಂಧ ಭಯೋತ್ಪಾಕರು ನಡೆಸಿದ ಕೃತ್ಯದ ವಿರುದ್ಧ ಜಗತ್ತಿನ ಮೂಲೆ ಮೂಲೆಯಿಂದ ಪಾಕಿಸ್ತಾನಕ್ಕೆ ಛೀಮಾರಿ ಬೀಳುತ್ತಿದೆ. ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ದೇಶಾದ್ಯಂತ ಆಗ್ರಹಿಸಲಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಪಾಕಿಸ್ತಾನಕ್ಕೆ ವ್ಯಾಪಾರ ಸ್ಥಗಿತದ ಪೆಟ್ಟು ನೀಡಿದೆ. ಇದರ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿದೆ.
ಮಾಂಸ ಕೆ.ಜಿಗೆ 798 ರೂ., ಅಕ್ಕಿ ಕೆ.ಜಿಗೆ 339 ರೂಪಾಯಿ ಇದೆ. ಇನ್ನು ಒಂದು ಡಜನ್ ಮೊಟ್ಟೆಗೆ 332 ರೂ., ಒಂದು ಕೆಜಿ ಸೇಬಿಗೆ 288 ರೂ. ಆಗಿದೆ. ಒಂದು ಲೀಟರ್ ಹಾಲಿಗೆ 224 ರೂ. ಇದ್ದರೆ, ಅರ್ಧ ಕೆ.ಜಿ ಬ್ರೆಡ್ಡಿಗೆ 161 ರೂ. ಆಗಿದೆ. ಒಂದು ಕೆ.ಜಿ ಬಾಳೆ ಹಣ್ಣಿಗೆ 176 ರೂ. ತೆರಬೇಕಾಗಿದ್ದರೆ, ಒಂದು ಕೆ.ಜಿ ಟೊಮ್ಯಾಟೋಗೆ 150 ರೂ. ಆಗಿದೆ.
ಪಾಕಿಸ್ತಾನಕ್ಕೆ ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದೆ. ಸದ್ಯದ ಪಾಕ್ ಜನರ ಪರಿಸ್ಥಿತಿ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಈಗ ಹಣದುಬ್ಬರವು ದೊಡ್ಡ ಸಮಸ್ಯೆಯಾಗಿ ಸುಡಲಾರಂಭಿಸಿದೆ.