ಜಮ್ಮು-ಕಾಶ್ಮೀರ :ಗಡಿಯಲ್ಲಿ ಮತ್ತೆ ತನ್ನ ದುಷ್ಟತನ ಮೆರೆದ ಪಾಕ್: ಭಾರತದಿಂದ ಕೌಂಟರ್‌ಫೈರಿಂಗ್.!!

ಜಮ್ಮು-ಕಾಶ್ಮೀರ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮೂರು ದಿನಗಳ ನಂತರ, ಪಾಕಿಸ್ತಾನ ಸೇನೆಯು ರಾತ್ರಿಯಿಡೀ ಭಾರತ ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಗುಂಡಿನ ದಾಳಿ ಆರಂಭಿಸಿದೆ.
ಹೌದು, ಭಾರತದ ಗಡಿಯಲ್ಲಿ ಪಾಕ್ ಮತ್ತೆ ಬಾಲ ಬಿಚ್ಚಿದೆ. ನಿಯಂತ್ರಣ ರೇಖೆಯ (ಎಲ್‌ಒಸಿ) ಕೆಲವು ಸ್ಥಳಗಳಲ್ಲಿ ಪಾಕಿಸ್ತಾನ ಸೇನೆಯು ಗುಂಡು ಹಾರಿಸಿದ್ದು, ಭಾರತೀಯ ಸೇನೆ ಕೂಡ ಇದಕ್ಕೆ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡಿದೆ.
ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಭಾರತೀಯ ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರವಾಗಿ ಹೆಚ್ಚಿದ್ದು, ನಿಯಂತ್ರಣ ರೇಖೆ (ಎಲ್‌ಒಸಿ) ಆಚೆಗೆ ದಾಳಿಯ ಸೂಚನೆ ಇತ್ತು. ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಭಾರತ ಈಗಾಗಲೇ ಹಲವಾರು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಈ ಹಿನ್ನೆಲೆ ಎರಡೂ ಮಿಲಿಟರಿ ಪಡೆಗಳು ಹೈ ಅಲರ್ಟ್ ಆಗಿವೆ.
ಈ ಶಕ್ತಿ ಪ್ರದರ್ಶನದಲ್ಲಿ ಭಾರತದ ಹೊಸ ಯುದ್ಧನೌಕೆ ಐಎನ್‌ಎಸ್ ಸೂರತ್, ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಯಶಸ್ವಿ ಕ್ಷಿಪಣಿ ಪ್ರತಿಬಂಧಕ ಪರೀಕ್ಷೆಯನ್ನು ನಡೆಸಿದೆ. ಕ್ಷಿಪಣಿಯು ಕಡಿಮೆ-ಹಾರುವ ವೈಮಾನಿಕ ಗುರಿಯನ್ನು ಹೊಡೆದುರುಳಿಸಿದೆ. ಪಾಕಿಸ್ತಾನವು ನೌಕಾ ಪ್ರದೇಶ ಕೂಡ ಎಚ್ಚರಿಕೆ ನೀಡಿದ್ದು, ಏಪ್ರಿಲ್ 24-25ರ ನಡುವೆ ಅರೇಬಿಯನ್ ಸಮುದ್ರದ ದೊಡ್ಡ ಭಾಗದಲ್ಲಿ ಶಸ್ತ್ರಾಸ್ತ್ರ ಗುಂಡಿನ ದಾಳಿಯನ್ನು ಘೋಷಿಸಿದೆ.