ಬೆಂಗಳೂರು :ಮಾಜಿ ಭೂಗತ ಡಾನ್, ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ  ಶೂಟೌಟ್ ನಡೆಸಿದ ದುಷ್ಕರ್ಮಿಗಳು.ತಡರಾತ್ರಿ ಬಿಡದಿ ನಿವಾಸದಲ್ಲಿ ಗುಂಡೇಟು, ಎರಡನೇ ಪತ್ನಿ, ಮಂಗಳೂರಿನ ಉದ್ಯಮಿ ವಿರುದ್ಧ ದೂರು.

ಬೆಂಗಳೂರು :ಮಾಜಿ ಭೂಗತ ಡಾನ್, ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಶೂಟೌಟ್ ನಡೆಸಿದ ದುಷ್ಕರ್ಮಿಗಳು.ತಡರಾತ್ರಿ ಬಿಡದಿ ನಿವಾಸದಲ್ಲಿ ಗುಂಡೇಟು, ಎರಡನೇ ಪತ್ನಿ, ಮಂಗಳೂರಿನ ಉದ್ಯಮಿ ವಿರುದ್ಧ ದೂರು.


ಬೆಂಗಳೂರು: ಮಾಜಿ ಭೂಗತ ಡಾನ್, ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಶೂಟೌಟ್ ನಡೆಸಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ. ಮುತ್ತಪ್ಪ ರೈಗೆ ಸೇರಿದ ಬಿಡದಿಯ ನಿವಾಸದ ಆವರಣದಲ್ಲಿ ಘಟನೆ ನಡೆದಿದೆ.

ತಡರಾತ್ರಿ 12:50ರ ಸುಮಾರಿಗೆ ಮೂರು ಸುತ್ತಿನ ಗುಂಡಿನ ದಾಳಿ ನಡೆದಿದೆ. ರಿಕ್ಕಿ ರೈ ಅವರನ್ನು ಗುರಿಯಾಗಿಸಿ ಗುಂಡು ಹಾರಿಸಲಾಗಿದೆ. ರಿಕ್ಕಿ ರೈ ಅವರು ಮೂಗು, ಕೈಗೆ ಗುಂಡು ತಾಗಿ ಗಾಯಗೊಂಡಿದ್ದಾರೆ. ರಿಕ್ಕಿ ರೈ ತನ್ನ ಕಪ್ಪು ಬಣ್ಣದ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ರಿಕ್ಕಿ ರೈ ಸಾಮಾನ್ಯವಾಗಿ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ, ದಾಳಿಕೋರರು ಡ್ರೈವಿಂಗ್ ಸೀಟ್‌ ಮೇಲೆ ಗುರಿ ಇಟ್ಟಿದ್ದರು. ಆದರೆ, ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದುದರಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು, ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ. 

ಎರಡು ದಿನದ ಹಿಂದಷ್ಟೇ ರಷ್ಯಾದಿಂದ ರಿಕ್ಕಿ ರೈ ವಾಪಸ್ ಆಗಿದ್ದರು. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ ಆಕ್ಟಿವ್ ಆಗಿದ್ದರು. ಕಾರು ಚಾಲಕ ರಾಜು ಗಾಯಗೊಂಡಿಲ್ಲ, ಅರವಿಂದ ಘಟ‌ನೆ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಬಿಡದಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ಘಟನೆ ಬಿಡದಿ ಠಾಣೆಯಲ್ಲಿ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾ, ಮಂಗಳೂರಿನ ಉದ್ಯಮಿ ರಾಕೇಶ್ ಮಲ್ಲಿ ಹಾಗೂ ನಿತೇಶ್ ಎಸ್ಟೇಟ್ ಕಂಪನಿಯ ವಿರುದ್ಧ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ. ‌

Ads on article

Advertise in articles 1

advertising articles 2

Advertise under the article