ಲಕ್ನೋ: ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ ತೊರೆದು ಮದುವೆಗಾಗಿ ಶಿವಾನಿಯಾದ ಶಬ್ನಮ್!!.

ಲಕ್ನೋ: ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ ತೊರೆದು ಮದುವೆಗಾಗಿ ಶಿವಾನಿಯಾದ ಶಬ್ನಮ್!!.


ಲಕ್ನೋ : ಉತ್ತರ ಪ್ರದೇಶದ ಅಮ್ರೊಹಾ ಜಿಲ್ಲೆಯಲ್ಲಿ ವಿಚಿತ್ರ ಮದುವೆ ನಡೆದಿದೆ. ಮೂರು ಮಕ್ಕಳನ್ನು ಹೊಂದಿರುವ 30 ವರ್ಷದ ಮಹಿಳೆಯೊಬ್ಬಳು 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾಳೆ. ವಿಶೇಷ ಅಂದ್ರೆ ತಾನು ಮುಸ್ಲಿಂ ಆಗಿದ್ದರೂ ಎಲ್ಲವನ್ನೂ ತೊರೆದು ಹಿಂದೂ ಹುಡುಗನನ್ನು ವರಿಸಿದ್ದಾಳೆ. ಪಿಯುಸಿ ವಿದ್ಯಾರ್ಥಿಯನ್ನು ಮದುವೆಯಾಗಿರುವುದು ದೇಶದಲ್ಲಿ ದೊಡ್ಡ ಸುದ್ದಿಯಾಗಿದೆ. 

ಶಬ್ನಮ್ ಎಂಬ ಈ ಯುವತಿಗೆ ಇದಕ್ಕೂ ಮೊದಲೇ ಎರಡು ಮದುವೆಯಾಗಿದ್ದವು. ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯಿದ್ದರೂ ಮತಾಂತರಗೊಂಡಿದ್ದು ಶಬ್ನಮ್​ ಈಗ ಶಿವಾನಿಯಾಗಿ ಬದಲಾಗಿದ್ದಾಳೆ. 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಮದುವೆಯಾಗಿದ್ದಾಳೆ. 

ಈ ಹಿಂದೆ ಶಬ್ನಮ್ ಮೀರತ್​​ನಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಳಂತೆ. ಬಳಿಕ ಆತನಿಗೆ ಡಿವೋರ್ಸ್ ಮಾಡಿಕೊಂಡು ಸಂಬಂಧ ಕಡಿದುಕೊಂಡಿದ್ದಳು. ನಂತರ ತೌಫಿಕ್ ಎಂಬಾತನನ್ನು ಮದುವೆಯಾಗಿದ್ದಳು. ತೌಫೀಕ್​ ಅಪಘಾತದಲ್ಲಿ ಕೈ ಕಾಲು ಕಳೆದುಕೊಂಡಾಗ ಆತನನ್ನು ಬಿಟ್ಟು ಬಂದಿದ್ದಳಂತೆ. ನಂತರ ಇತ್ತೀಚೆಗೆ 12ನೇ ತರಗತಿ ಓದುತ್ತಿರುವ 18 ವರ್ಷದ ಯುವಕನ ಜೊತೆ ಸಂಬಂಧವನ್ನು ಬೆಳೆಸಿದ್ದಾಳೆ. ಇವನಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಶಿವಾನಿ ಎಂದು ಬದಲಿಸಿದ್ದಾಳೆ. 

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಹುಡುಗನ ತಂದೆ, ಮಗನ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದರಿಂದ ನಮ್ಮ ಕುಟುಂಬಕ್ಕೂ ಸಂತೋಷವಾಗಿದೆ. ಜೋಡಿಗಳು ಸಂತೋಷದಿಂದ ಇದ್ದಾರೆ. ನಮ್ಮದು ಒಂದೇ ಆಸೆ, ಇಬ್ಬರು ಒಟ್ಟಿಗೆ ಸಂತೋಷದಿಂದ ಕೊನೆಯ ತನಕ ಬಾಳಲಿ ಅನ್ನೋದು ಅಂತ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article