ಉಡುಪಿ :ಕಾಪು ಮಾರಿಗುಡಿಗೆ ದೇವಸ್ಥಾನಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಭೇಟಿ.
Sunday, April 20, 2025

ಉಡುಪಿ: ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿ ತನ್ನ ಕುಟುಂಬ ಸಮೇತ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೊಸ ಮಾರಿಗುಡಿಗೆ ಭೇಟಿ ಕೊಟ್ಟರು. ಇತ್ತೀಚಿಗಷ್ಟೇ ಬ್ರಹ್ಮಕಲಶೋತ್ಸವದ ಮೂಲಕ ಹೊಸ ಮೆರುಗು ಪಡೆದಿರುವ ದೇವಾಲಯವನ್ನು ಕಂಡು ಸಂಭ್ರಮಿಸಿದರು.
ದೇವಾಲಯದ ನಿರ್ಮಾಣ ಹಾಗೂ ಇಲ್ಲಿನ ಶಿಲ್ಪಗಳ ರಚನೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. ಇದೀಗ ತಮ್ಮ ತಾಯಿಯೊಟ್ಟಿಗೆ ಕಾಪುವಿನ ಮಾರಿಗುಡಿ ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಸುನಿಲ್ ಶೆಟ್ಟಿ ಮತ್ತು ಅವರ ತಾಯಿಯನ್ನು ಸನ್ಮಾನಿಸಿದ ದೇವಾಲಯದ ಮಂಡಳಿಯವರು ಮಾರುಗುಡಿ ತಾಯಿಯ ಚಿತ್ರವನ್ನು ಉಡುಗೊರೆಯಾಗಿ ನೀಡಿದರು.