ಬಿಹಾರ:ಐ ಫೋನ್ ಕೊಡಿಸಲಿಲ್ಲ ಎಂದು ತನ್ನ ಕೈಯನ್ನು ಕಟ್ ಮಾಡಿಕೊಂಡ ಯುವತಿ..!!!
Tuesday, April 1, 2025

ಬಿಹಾರ :18 ರ ಹರೆಯದ ಯುವತಿಯೊಬ್ಬಳು ಪೋಷಕರು ಐಫೋನ್ ಕೊಡಿಸಲಿಲ್ಲವೆಂದು ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ಬಿಹಾರದ ಮುಂಗೇರ್ ಎಂಬಲ್ಲಿ ನಡೆದಿದೆ. ಬಾಯ್‌ಫ್ರೆಂಡ್ ಜೊತೆ ಮಾತನಾಡುವ ಸಲುವಾಗಿ ಆಕೆ ತನ್ನ ಪೋಷಕರ ಬಳಿ 1.5 ಲಕ್ಷ ಮೌಲ್ಯದ ಐಫೋನ್ ಕೊಡಿಸುವಂತೆ ಕೇಳಿದ್ದು, ಇದಕ್ಕೆ ಒಲ್ಲೆ ಎಂದಿದ್ದಕ್ಕೆ 18 ವರ್ಷ ವಯಸ್ಸಿನ ಯುವತಿ ಕೋಪದಲ್ಲಿ ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ಆಸ್ಪತ್ರೆಗೆ ಸೇರಿದ್ದಾಳೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಾಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೈ ಕೊಯ್ದುಕೊಂಡು ಆಸ್ಪತ್ರೆಗೆ ದಾಖಲಾದ ಯುವತಿ ನನಗೆ ಜೀವನದಲ್ಲಿ ಬೇರೆ ಯಾವುದೇ ಸಮಸ್ಯೆ ಇಲ್ಲ, ನನಗೆ ದುಬಾರಿ ಬೆಲೆಯ ಐಫೋನ್ ಮಾತ್ರ ಬೇಕು ಅಷ್ಟೆ ಎಂದು ಹೇಳಿದ್ದಾಳೆ.