ವಾಷಿಂಗ್ಟನ್ :ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ದೇಶ ಎಂದು ವರ್ಣಿಸಿದ ಸುನೀತಾ ವಿಲಿಯಮ್ಸ್‌

ವಾಷಿಂಗ್ಟನ್ :ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ದೇಶ ಎಂದು ವರ್ಣಿಸಿದ ಸುನೀತಾ ವಿಲಿಯಮ್ಸ್‌

ವಾಷಿಂಗ್ಟನ್‌: ಬಾಹ್ಯಾಕಾಶದಿಂದ ಹಿಂದಿರುಗಿದ ನಂತರ ಮೊದಲ ಬಾರಿಗೆ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಭಾರತ ಬಾಹ್ಯಾಕಾಶ ಜಗತ್ತಿನಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದೆ. ನಾನು ಅವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಬಾಹ್ಯಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತದೆ. ಹಿಮಾಲಯದ ಮೇಲೆ ಹೋದಾಗಲೆಲ್ಲ ಅದ್ಬುತ ಚಿತ್ರಗಳು ಸಿಕ್ಕವು. ಗುಜರಾತ್ ಮತ್ತು ಮುಂಬೈ ದೀಪಗಳ ಜಾಲದಂತೆ ಕಾಣುತ್ತದೆ ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ದೇಶ ಎಂದು ಬಣ್ಣಿಸಿದ್ದಾರೆ.

ನಾನು ಶೀಘ್ರದಲ್ಲೇ ನನ್ನ ತಂದೆಯ ತಾಯ್ನಾಡಿಗೆ ಭೇಟಿ ನೀಡುತ್ತೇನೆ. ಮುಂದಿನ ಆಕ್ಸಿಯಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಲಿರುವ ಭಾರತೀಯ ಪ್ರಜೆಗಳನ್ನು ಭೇಟಿ ಮಾಡುತ್ತೇನೆ. ನಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದೆಂದು ನಾನು ಭಾವಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬಾಹ್ಯಾಕಾಶ ನೌಕೆಯನ್ನು ಭೂಮಿಗೆ ಮರಳಿ ತಂದಿದ್ದಕ್ಕಾಗಿ ಸುನೀತಾ ವಿಲಿಯಮ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article