ಮಂಗಳೂರು :ಬಡ ಹೆಣ್ಮಗಳ ಮದುವೆ ಉದ್ದೇಶಕ್ಕೆ ಕ್ರೌಡ್ ಫಂಡಿಂಗ್ ಮಾಡ್ತಿದ್ದ ವ್ಯಕ್ತಿಗೇ ಹನಿಟ್ರ್ಯಾಪ್ ; ಸಮಾಜಸೇವೆ ಸೋಗಿನ ಆಸಿಫ್ ಆಪತ್ಬಾಂಧವ, ರವೂಫ್ ಬೆಂಗರೆ ಸೇರಿ ಮೂವರ ವಿರುದ್ಧ ಎಫ್ಐಆರ್, ಸಂತ್ರಸ್ತ ವ್ಯಕ್ತಿ ಆತ್ಮಹತ್ಯೆ ಯತ್ನ- ಗಂಭೀರ.!!

ಮಂಗಳೂರು :ಬಡ ಹೆಣ್ಮಗಳ ಮದುವೆ ಉದ್ದೇಶಕ್ಕೆ ಕ್ರೌಡ್ ಫಂಡಿಂಗ್ ಮಾಡ್ತಿದ್ದ ವ್ಯಕ್ತಿಗೇ ಹನಿಟ್ರ್ಯಾಪ್ ; ಸಮಾಜಸೇವೆ ಸೋಗಿನ ಆಸಿಫ್ ಆಪತ್ಬಾಂಧವ, ರವೂಫ್ ಬೆಂಗರೆ ಸೇರಿ ಮೂವರ ವಿರುದ್ಧ ಎಫ್ಐಆರ್, ಸಂತ್ರಸ್ತ ವ್ಯಕ್ತಿ ಆತ್ಮಹತ್ಯೆ ಯತ್ನ- ಗಂಭೀರ.!!


ಮಂಗಳೂರು : ಬಡ ಹೆಣ್ಮಗಳಿಗೆ ಮದುವೆ ಮಾಡುವ ಉದ್ದೇಶದಲ್ಲಿ ಕ್ರೌಡ್ ಫಂಡಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವೆ ಸೋಗಿನ ಆಸಿಫ್ ಆಪತ್ಬಾಂಧವ ಮತ್ತು ಇನ್ನಿಬ್ಬರು ಸೇರಿಕೊಂಡು ಹನಿಟ್ರ್ಯಾಪ್ ಮಾಡಿದ್ದು, ಇದರಿಂದ ನೊಂದ ಸಂತ್ರಸ್ತ ವ್ಯಕ್ತಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ಅಕ್ಬರ್ ಸಿದ್ಧಿಕ್ ಸಂತ್ರಸ್ತ ವ್ಯಕ್ತಿಯಾಗಿದ್ದು, ಹನಿಟ್ರ್ಯಾಪ್ ಭೀತಿಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆಸಿಫ್ ಆಪತ್ಬಾಂಧವ, ರವೂಫ್ ಬೆಂಗರೆ ಮತ್ತು ಮಿನಾಜ್ ಎಂಬ ಮಹಿಳೆಯ ವಿರುದ್ಧ ಎಫ್ಐಆರ್ ಆಗಿದೆ.

ಮಂಗಳೂರಿನ ಬಡ ಹೆಣ್ಮಗಳೊಬ್ಬಳ ಮದುವೆ ಉದ್ದೇಶಕ್ಕಾಗಿ ಅಲ್ ಮದೀನಾ ಟ್ರಸ್ಟ್ ಹೆಸರಿನಲ್ಲಿ ಅಕ್ಬರ್ ಸಿದ್ದಿಕ್ ಹಣ ಸಂಗ್ರಹ ಮಾಡುತ್ತಿದ್ದರು. ಆದರೆ ಹಣ ಹೆಚ್ಚು ಸಂಗ್ರಹವಾಗದೇ ಇದ್ದ ಸಂದರ್ಭದಲ್ಲಿ ಮದುವೆಯಾಗುವ ಯುವತಿಯ ಸೋದರಿ ಎಂಬ ಹೆಸರಲ್ಲಿ ಎಪ್ರಿಲ್ 8ರಂದು ರಾತ್ರಿ ವಾಟ್ಸಾಪ್ ಕರೆ ಮಾಡಿದ್ದ ಮಿನಾಜ್ ಎಂಬ ಮತ್ತೊಬ್ಬ ಮಹಿಳೆ, ನೀವು ಇಷ್ಟು ಹಣ ಸಂಗ್ರಹ ಮಾಡಿದರೆ ಸಾಲದು. ದೊಡ್ಡ ಮೊತ್ತದ ಹಣ ಸಂಗ್ರಹ ಮಾಡಬೇಕು. ಇದಕ್ಕೆ ಬೇಕಾದರೆ ನಿಮ್ಮ ಜೊತೆಗೆ ಎಲ್ಲದಕ್ಕೂ ಸಹಕರಿಸುತ್ತೇನೆ. ಅಗತ್ಯ ಬಿದ್ದರೆ ಲೈಂಗಿಕ ಸುಖ ನೀಡುವುದಕ್ಕೂ ರೆಡಿ ಇದ್ದೇನೆ ಎಂದು ಹೇಳಿ ಕರೆ ಮಾಡಿದ್ದಳು. ಅಲ್ಲದೆ, ವಾಟ್ಸಪ್ ಚಾಟಿಂಗ್ ಮತ್ತು ವಿಡಿಯೋ ಕರೆಯನ್ನೂ ಮಾಡಿದ್ದಳು.

ಮರುದಿನ ಆಸಿಫ್ ಆಪತ್ಪಾಂಧವ ಮತ್ತು ರವೂಫ್ ಬೆಂಗರೆ ಮಿನಾಜ್ ಎಂಬ ಮಹಿಳೆಯ ಜೊತೆಗಿನ ಚಾಟಿಂಗ್ ಮತ್ತು ವಿಡಿಯೋ ಕರೆಯ ಸ್ಕ್ರೀನ್ ಶಾಟ್ ಮುಂದಿಟ್ಟು ಅಕ್ಬರ್ ಸಿದ್ದಿಕ್ ಗೆ ಕರೆ ಮಾಡಿದ್ದು, ಮೂರು ಲಕ್ಷ ನಗದು ಮತ್ತು ಮೂರು ಪವನ್ ಚಿನ್ನ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಎಪ್ರಿಲ್ 10ರ ಒಳಗಡೆ ಹಣ ಸಂದಾಯ ಮಾಡದಿದ್ದರೆ ಚಾಟಿಂಗ್ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಬ್ಲಾಕ್ಮೇಲ್ ಮಾಡಿದ್ದಾರೆ. ಇದರಿಂದ ಭೀತಿಗೊಳಗಾದ ಅಕ್ಬರ್ ಸಿದ್ದಿಕ್ ಎಪ್ರಿಲ್ 12ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲದೆ, ಪುಂಜಾಲಕಟ್ಟೆ ಠಾಣೆಗೆ ಈ ಬಗ್ಗೆ ದೂರು ಕೊಟ್ಟಿದ್ದು, ಎಫ್ಐಆರ್ ದಾಖಲಾಗಿದೆ.

ಆಸಿಫ್ ಮತ್ತು ರವೂಫ್ ಬೆಂಗರೆ ಬ್ಲಡ್ ಡೊನೇಶನ್, ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಸಮಾಜ ಸೇವೆಯ ಪೋಸು ನೀಡುತ್ತಾರೆ. ಇದೀಗ ತಮ್ಮದೇ ಸಮುದಾಯದ ಮತ್ತೊಬ್ಬ ವ್ಯಕ್ತಿ ಬಡ ಹೆಣ್ಮಗಳ ಪರವಾಗಿ ಕ್ರೌಡ್ ಫಂಡಿಂಗ್ ನಡೆಸುತ್ತಿದ್ದಾಗ ಬೇರೊಬ್ಬ ಮಹಿಳೆಯನ್ನು ಛೂಬಿಟ್ಟು ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ. ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದು, ಸಂತ್ರಸ್ತ ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Ads on article

Advertise in articles 1

advertising articles 2

Advertise under the article