ನ್ಯಾಷನಲ್:ಮದುವೆಯಲ್ಲಿ ಸಿಕ್ಕ ಐಷಾರಾಮಿ ಉಡುಗೊರೆಗಳನ್ನು ಪ್ರದರ್ಶನಕ್ಕೆ ಇಟ್ಟ ವರ

ನ್ಯಾಷನಲ್:ಮದುವೆಯಲ್ಲಿ ಸಿಕ್ಕ ಐಷಾರಾಮಿ ಉಡುಗೊರೆಗಳನ್ನು ಪ್ರದರ್ಶನಕ್ಕೆ ಇಟ್ಟ ವರ

ಇಲ್ಲೊಬ್ಬ ಮದುವೆಯ ಹೆಸರಿನಲ್ಲಿ ನೀಡಲಾದ ಐಷಾರಾಮಿ ಉಡುಗೊರೆಗಳನ್ನು ಅದ್ದೂರಿ ಪ್ರದರ್ಶನಕ್ಕೆ ಇಟ್ಟರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿಭಾರಿ ವೈರಲ್ ಆಗಿದೆ.

ಮದುವೆಯ ಹೆಸರಿನಲ್ಲಿ ನೀಡಲಾದ ಐಷಾರಾಮಿ ವಸ್ತುಗಳ ಪ್ರಮಾಣ ಮತ್ತು ವೈಭವವನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಐಷಾರಾಮಿ ಕಾರುಗಳು, ಬೈಕ್‌ಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಡಜನ್ ಗಟ್ಟಲೆ ಫ್ರಿಡ್ಜ್, ಟಿವಿ, ಎಸಿ, ನೂರಾರು ಸೀರೆಗಳು, ಸಾವಿರಾರು ಪಾತ್ರೆಗಳು ಮತ್ತು ಬೆಲೆಬಾಳುವ ಪೀಠೋಪಕರಣಗಳನ್ನು ಸಾಲಾಗಿ ಜೋಡಿಸಿ, ಪ್ರದರ್ಶನಕ್ಕೆ ಇಟ್ಟಿದ್ದಾನೆ.

ಅಷ್ಟೇ ಅಲ್ಲ, ವರನಿಗೆ ಮಾತ್ರವಲ್ಲದೆ, ಅವನ ಮಾವ, ಭಾವ ಮತ್ತು ಇಬ್ಬರು ಅತ್ತಿಗೆಯಂದಿರಿಗೂ ಬೈಕ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ! ಡಿಸೈನರ್ ಬಟ್ಟೆಗಳು ಮತ್ತು ಬ್ರಾಂಡೆಡ್ ಗೃಹೋಪಯೋಗಿ ವಸ್ತುಗಳೂ ಈ ಪಟ್ಟಿಯಲ್ಲಿವೆ.

ಈ ವಿಡಿಯೋಯನ್ನು ಕಂಡು ವೀಕ್ಷಕರು ಬೆರಗಾಗಿದ್ದಾರೆ. ಕೆಲವರು ಕುಟುಂಬದ ಔದಾರ್ಯವನ್ನು ಹೊಗಳಿದರೆ, ಇನ್ನೂ ಅನೇಕರು ಈ ರೀತಿಯ ಅದ್ದೂರಿ ಪ್ರದರ್ಶನದ ಮೂಲಕ ವರದಕ್ಷಿಣೆ ಸಂಸ್ಕೃತಿಯನ್ನು ಬೆಂಬಲಿಸಿದ್ದಕ್ಕಾಗಿ ಟೀಕಿಸಿದ್ದಾರೆ. “ಇದು ಪ್ರೀತಿಯ ಆಚರಣೆಯಲ್ಲ, ಕೇವಲ ಶ್ರೀಮಂತಿಕೆಯ ಪ್ರದರ್ಶನ” ಎಂದು ಅನೇಕ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋ ವರದಕ್ಷಿಣೆ ಪದ್ಧತಿಯ ಕಾನೂನುಬದ್ಧತೆ ಮತ್ತು ನೈತಿಕತೆಯ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ. ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಇಂತಹ ಆಚರಣೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ವೈರಲ್ ವಿಡಿಯೋದಿಂದ ಯಾವುದೇ ಅಧಿಕೃತ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ

Ads on article

Advertise in articles 1

advertising articles 2

Advertise under the article