ಆರೋಗ್ಯ ಭಾಗ್ಯ : ತುಂಬಾ ದಿನಗಳವರೆಗೆ ಫ್ರಿಡ್ಜ್ನಲ್ಲಿ ಮೊಟ್ಟೆಯನ್ನು ಶೇಖರಿಸಿಡುತ್ತಿದ್ದೀರಾ?? ಏನಾಗುತ್ತದೆ ನೋಡಿ..!!
ತರಕಾರಿಯನ್ನು ವಾರಕ್ಕೊಮ್ಮೆ ಖರೀದಿ ಮಾಡಿ, ಅವುಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹ ಮಾಡುತ್ತಾರೆ. ಕೆಲವರಂತೂ ತರಕಾರಿ ಕತ್ತರಿಸಿಕೊಂಡು ಡಬ್ಬಕ್ಕೆ ತುಂಬಿಸಿಯೇ ಇಟ್ಕೊಂಡು ಸಮಯ ಉಳಿತಾಯ ಮಾಡುತ್ತಾರೆ. ತರಕಾರಿ ಜೊತೆಯಲ್ಲಿ ಮೊಟ್ಟೆಗಳನ್ನು ಫ್ರಿಡ್ಜ್ನಲ್ಲಿ ಇರಿಸುತ್ತಾರೆ. ಆದರೆ ದೀರ್ಘಕಾಲದವರೆ ಮೊಟ್ಟೆಗಳನ್ನು ಫ್ರಿಡ್ಜ್ನಲ್ಲಿ ಇರಿಸಿದ್ರೆ ಏನಾಗುತ್ತೆ ಗೊತ್ತಾ?
ಫ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ಇಡುವುದನ್ನು ಸಾಮಾನ್ಯವಾಗಿ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಮೊಟ್ಟೆಗಳು ನೈಸರ್ಗಿಕ ತೇವಾಂಶವನ್ನು ಹೊಂದಿರುತ್ತವೆ.
ಮೊಟ್ಟೆಗಳನ್ನು ಘನೀಕರಿಸುವಾಗ ಈ ತೇವಾಂಶವು ಸ್ಫಟಿಕೀಕರಣಗೊಳ್ಳುತ್ತದೆ ಮತ್ತು ಮೊಟ್ಟೆಯೊಳಗಿನ ರಚನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮೊಟ್ಟೆಗಳ ಗುಣಮಟ್ಟ ಮತ್ತು ವಿನ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮೊಟ್ಟೆಯನ್ನು ಫ್ರಿಡ್ಜ್ ನಲ್ಲಿಟ್ಟರೆ ಒಂದು ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾ ಹುಟ್ಟುತ್ತದೆ. ಫ್ರಿಜ್ ಒಳಗಿನ ತಾಪಮಾನದಲ್ಲಿ ಯಾವುದೇ ಬದಲಾವಣೆ ಉಂಟಾಗದ ಕಾರಣ ಮೊಟ್ಟೆಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳು ಜೀವಂತವಾಗಿರುತ್ತದೆ.
ಬ್ಯಾಕ್ಟೀರಿಯಾಗಳಲ್ಲಿ ‘ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ’ ಆಹಾರದಿಂದ ಹರಡುವ ರೋಗಗಳಿಗೆ ಕಾರಣವಾಗಿದೆ. ಆದ್ರಿಂದ ಮೊಟ್ಟೆಗಳನ್ನು ಫ್ರಿಡ್ಜ್ನಲ್ಲಿ ಇರಿಸೋದು ಉತ್ತಮ ಅಲ್ಲ ಅನ್ನೋದು ಆರೋಗ್ಯ ತಜ್ಞರ ಸಲಹೆಯಾಗಿದೆ. ಬೇಕಾದಾಗ ತಾಜಾ ಮೊಟ್ಟೆಗಳನ್ನು ಖರೀದಿಸೋದು ಒಳ್ಳೆಯದು ಮತ್ತು ಸಾಮಾನ್ಯ ವಾತಾವರಣದಲ್ಲಿಯೂ ದೀರ್ಘ ಕಾಲದವರೆಗೆ ಮೊಟ್ಟೆಗಳನ್ನು ಸಂಗ್ರಹ ಮಾಡಬಾರದು.
ಮೊಟ್ಟೆಗಳನ್ನು ಶೇಖರಿಸಿಡಲು ಉತ್ತಮ ಮಾರ್ಗವೆಂದರೆ ರೆಫ್ರಿಜರೇಟರ್‌ನಲ್ಲಿ ಕೋಣೆಯ ಉಷ್ಣಾಂಶದಲ್ಲಿ, ಅಂದರೆ ಸುಮಾರು 4 ° C ನಲ್ಲಿ ಇಡುವುದು. ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಮೊಟ್ಟೆಗಳು ಸಾಮಾನ್ಯವಾಗಿ 3 ರಿಂದ 5 ವಾರಗಳವರೆಗೆ ತಾಜಾತನವನ್ನು ಉಳಿಸಿಕೊಳ್ಳುತ್ತವೆ.
ರೆಫ್ರಿಜರೇಟರ್ನಲ್ಲಿ ಸಾಮಾನ್ಯ ತಾಪಮಾನದಲ್ಲಿ ಮೊಟ್ಟೆಗಳನ್ನು ಇಡುವುದು ಉತ್ತಮ. ಏಕೆಂದರೆ ಅದು ಮೊಟ್ಟೆ ಹಾಳಾಗುವ ಅಪಾಯವನ್ನು ಕಡಿಮೆ ಮಾಡುತ್ತವೆ. ಮೊಟ್ಟೆಗಳನ್ನು ತೇವಾಂಶ-ಮುಕ್ತ ವಾತಾವರಣದಲ್ಲಿ ಇರಿಸಿ.