ಬೆಂಗಳೂರು :ನಿವೃತ್ತ DG-IGP ಓಂ ಪ್ರಕಾಶ್ ಜೀವ ತೆಗೆದು ಭಯಾನಕ ಕೃತ್ಯವೆಸಗಿದ ಪತ್ನಿ; ಅಸಲಿಗೆ ಆಗಿದ್ದೇನು? ಬೆಂಗಳೂರಿನ 2 ಭಯೋತ್ಪಾದನಾ ಪ್ರಕರಣ ತನಿಖೆ ಮಾಡಿದ್ದ ಓಂ ಪ್ರಕಾಶ್; ಬೆಂಗಳೂರಿನಲ್ಲಿ ಓಂ ಪ್ರಕಾಶ್ ಅವರ ದುರಂತ ಅಂತ್ಯಕ್ಕೆ ಕಾರಣವೇನು?
ಸಿಲಿಕಾನ್ ಸಿಟಿಯ ನಿವೃತ್ತ ಪೊಲೀಸ್ ಮಹಾನಿರ್ದೇಶಕರು ಓಂ ಪ್ರಕಾಶ್ ಅವರ ಬರ್ಬರ ಹತ್ಯೆಯಾಗಿದೆ. ಅವರ ದೇಹದ ಮೂರು ಕಡೆಗಳಲ್ಲಿ ಚಾಕುವಿನಿಂದ ಇರಿದು ಭೀಕರವಾಗಿ ಜೀವ ತೆಗೆಯಲಾಗಿದೆ. ಸದ್ಯ ಈ ಸಂಬಂಧ ಡಿಜಿ ಮತ್ತು ಐಜಿಪಿಯಾಗಿದ್ದ ಓಂಪ್ರಕಾಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.
ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರು ಬಿಹಾರ ಮೂಲದವರು. 1981 ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದರು. ತಮ್ಮ ಕರ್ತವ್ಯದಲ್ಲಿ ತುಂಬಾ ಚಾಣಕ್ಷರಾಗಿದ್ದ ಓಂ ಪ್ರಕಾಶ್ ಅವರು ಬೆಂಗಳೂರಿನ ಎರಡು ಭಯೋತ್ಪಾದಕ ಪ್ರಕರಣಗಳನ್ನು ತನಿಖೆ ಮಾಡಿದ್ದರು. 2013 ಏಪ್ರಿಲ್ 17ರಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ನಡೆದ ಸ್ಫೋಟ ಹಾಗೂ 2014 ಡಿಸೆಂಬರ್ 28 ರಂದು ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಬ್ಲಾಸ್ಟ್ ಪ್ರಕರಣದಲ್ಲಿ ಶಂಕಿತ ಉಗ್ರರನ್ನ ಬಂಧಿಸಿದ್ದರು.
ಕೌಟುಂಬಿಕ ಕಲಹ ಹಿನ್ನೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನ ಹೆಂಡತಿಯೇ ಬರ್ಬರವಾಗಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.