ಧರ್ಮಸ್ಥಳ :ಕರಾವಳಿ ಹಿಂದುತ್ವದ ಭದ್ರಕೋಟೆ ಅಂತ ಯಾರು ಹೇಳಿದ್ದು? ಎಲ್ಲಾ ಧರ್ಮಕ್ಕೂ ಇದು ಭದ್ರಕೋಟೆ. ಇಲ್ಲಿನ ನೀರು, ದೇವಸ್ಥಾನ, ದರ್ಗಾ, ಪರಿಸರ, ಸಮುದ್ರ, ಬ್ಯಾಂಕ್ ಗಳು ಜಾತಿ- ಧರ್ಮದ ಮೇಲಿದ್ಯಾ? ಇಲ್ಲಿ ಯಾವುದೂ ಜಾತಿ ಮೇಲೆ ಇಲ್ಲ, ನೀತಿಯ ಮೇಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ.

ಮಂಗಳೂರು : ಕರಾವಳಿ ಹಿಂದುತ್ವದ ಭದ್ರಕೋಟೆ ಅಂತ ಯಾರು ಹೇಳಿದ್ದು? ಎಲ್ಲಾ ಧರ್ಮಕ್ಕೂ ಇದು ಭದ್ರಕೋಟೆ. ಇಲ್ಲಿನ ನೀರು, ದೇವಸ್ಥಾನ, ದರ್ಗಾ, ಪರಿಸರ, ಸಮುದ್ರ, ಬ್ಯಾಂಕ್ ಗಳು ಜಾತಿ- ಧರ್ಮದ ಮೇಲಿದ್ಯಾ? ಇಲ್ಲಿ ಯಾವುದೂ ಜಾತಿ ಮೇಲೆ ಇಲ್ಲ, ನೀತಿಯ ಮೇಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಇಲ್ಲಿ ಹಿಂದೂ ಅಂತ ಮಾತ್ರ ಇಲ್ಲ, ಕೆಲವರು ನಾವೆಲ್ಲ ಹಿಂದೂ, ಒಂದು ಅಂತಿದಾರೆ. ಕೃಷಿಕರು, ಜೈನರು, ಒಕ್ಕಲಿಗರು, ಬಿಲ್ಲವರು, ಲಿಂಗಾಯತರು ನಾವೆಲ್ಲಾ ಒಂದು ಅಂತೀವಿ. ಬಿಜೆಪಿಯವರು ಏನಾದರೂ ಮಾಡಲಿ, ನಾವು ಎಲ್ಲಾ ಧರ್ಮದವರ ಪರ ಕೆಲಸ ಮಾಡ್ತೇವೆ. ಎಲ್ಲಾ ವರ್ಗದ ಜನರನ್ನೂ ನಾವು ರಕ್ಷಣೆ ಮಾಡಲೇ ಬೇಕು. ಅವರು ಹೇಳೋದನ್ನ ರಾಜ್ಯದ ಜನ ಒಪ್ಪಬೇಕಲ್ವಾ ಎಂದು ಪ್ರಶ್ನಿಸಿದರು.




ಕರಾವಳಿಯಲ್ಲಿ ಜನರ ಬದುಕು ಮುಖ್ಯ, ಇಲ್ಲಿ ಭಾವನೆಗಿಂತ ಬದುಕು ಮುಖ್ಯ. ಬದುಕಿದ್ದರೆ ಭಾವನೆ, ಭಾವನೆ ಮೇಲೆ ರಾಜಕೀಯ ಮಾಡುವ ಬದಲು ಬದುಕಿನ ಮೇಲೆ ರಾಜಕೀಯ ಮಾಡಬೇಕು. ಇಲ್ಲಿ ಇಬ್ಬರು ಮಾತ್ರ ನಮ್ಮವರು ಗೆದ್ದಿದ್ದಾರೆ, ಮುಂದೆಯೂ ಸರ್ಕಾರ ಬರುತ್ತೆ. ಜನರಿಗೂ ಒಳ್ಳೆಯದಾಗುತ್ತೆ, ನಮ್ಮ ಬಲಿಷ್ಠ ಸರ್ಕಾರ ಇದೆ. ಆದರೆ ಇಲ್ಲಿ ನಮಗೆ ಪ್ರತಿನಿಧಿಗಳು ಬೇಕಲ್ವಾ? ಹಾಗಾಗಿ ಬರ್ತಾ ಇದೀನಿ. ಬಿಜೆಪಿಗೆ ಓಟ್ ಹಾಕಿ ಗೆಲ್ಲಿಸಿದ್ದಾರೆ, ಆದರೆ ಅವರಿಂದ ಇಲ್ಲಿ ಯಾವುದೇ ಉಪಯೋಗ ಅಗ್ತಾ ಇಲ್ಲ. ಕಾಂಗ್ರೆಸ್ ನಿಂದ ಸಹಾಯ ಆಗ್ತಾ ಇದೆ, ಅದನ್ನು ಮನದಟ್ಟು ಮಾಡಬೇಕು. ನಮ್ಮ ಸರ್ಕಾರದಲ್ಲಿ ಇಲ್ಲಿನ ಮಂತ್ರಿಗಳೂ ಇರಲಿ ಅನ್ನೋದು ನನ್ನ ಆಸೆ ಎಂದು ಹೇಳಿದರು.
ಜಾತಿಗಣತಿ ವಿಚಾರದಲ್ಲಿ ರಾಹುಲ್ ಗಾಂಧಿ ಪತ್ರ ನಾನು ನೋಡಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲರಿಗೂ ಸರಿ ಸಮಾನತೆ ನೋಡುವ ಮೂಲಸಿದ್ದಾಂತ ಹೊಂದಿದೆ. ಎಲ್ಲರಿಗೂ ನ್ಯಾಯ ಕೊಡಬೇಕು, ತುಳಿತಕ್ಕೆ ಒಳಗಾದ ಸಮಾಜಕ್ಕೆ ಶಕ್ತಿ ಕೊಡಬೇಕು. ರಾಹುಲ್ ಗಾಂಧಿಯವರು ಯಾರಿಗೂ ಅನ್ಯಾಯ ಆಗಬೇಕು ಅಂತ ಹೇಳಿಲ್ಲ. ಜೈನರಲ್ಲಿ, ಬ್ರಾಹ್ಮಣರಲ್ಲಿ, ಲಿಂಗಾಯತ, ಒಕ್ಕಲಿಗರಲ್ಲಿ ಬಡವರಿಲ್ವಾ ? ವರದಿ ಬಗ್ಗೆ ಈಗ ಚರ್ಚೆ ಮಾಡ್ತಾ ಇದೀವಿ, ಅವಕಾಶ ಮಾಡಿ ಕೊಡ್ತಾ ಇದೀವಿ.
ಸಮೀಕ್ಷೆ ಸಂದರ್ಭದಲ್ಲಿ ಕೆಲವರು ಮನೆಗಳಲ್ಲಿ ಇರಲಿಲ್ಲ, 90 ಶೇ. ಸಮೀಕ್ಷೆ ಆಗಿದೆ, 10% ಇನ್ನೂ ಆಗಬೇಕಿದೆ. ಎಲ್ಲರಿಗೂ ನ್ಯಾಯ ಒದಗಿಸಿಕೊಡ್ತೀವಿ, ನಮಗೆ ಇನ್ನೂ ಸಮಯ ಇದೆ, ತಾಳ್ಮೆಯಿಂದ ಇರಿ. ಆತುರದ ತೀರ್ಮಾನ ಯಾರೂ ಎಲ್ಲಿಯೂ ತೆಗೆದುಕೊಳ್ಳಲ್ಲ ಎಂದರು. ವಕ್ಳ್ ಹೋರಾಟದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ನಾನು ಆರ್.ಅಶೋಕ್ ವಕ್ತಾರ ಅಲ್ಲ, ಕಾಂಗ್ರೆಸ್ ವಕ್ತಾರ ಎಂದು ಚುಟುಕಾಗಿ ಉತ್ತರಿಸಿದರು.