ಕೆನಡ: ಮ್ಯಾನಿಟೋಬಾದ ನಾರ್ಸಿಸೆಯು ಹಾವುಗಳು ಮಧುಚಂದ್ರ ಸ್ಥಳ.!! ಇದು ಭೂಮಿಯ ಮೇಲಿನ ಅತ್ಯಂತ ಅಸಾಧಾರಣ ಹಾವುಗಳ ಮಿಲನ ಕೂಟ..!!
ಕೆನಡ: ಮ್ಯಾನಿಟೋಬಾದಲ್ಲಿರುವ ನಾರ್ಸಿಸ್ಸೆಯಲ್ಲಿ ಪ್ರತಿ ವಸಂತಕಾಲದಲ್ಲಿ, ಸಾವಿರಾರು ಹಾವುಗಳು ಗುಹೆಗಳಿಂದ ಹೊರಬರುತ್ತವೆ. ಇದು ಭೂಮಿಯ ಮೇಲಿನ ಅತ್ಯಂತ ಅಸಾಧಾರಣ “ಮಧುಚಂದ್ರ” ಕೂಟ. ಇಲ್ಲಿ ಕಂಡು ಬರುವ ಹಾವುಗಳು ಕೆಂಪು-ಬದಿಯ ಗಾರ್ಟರ್ ಹಾವು .ವಿಶ್ವದಲ್ಲೇ ನಾರ್ಸಿಸ್ ಸ್ನೇಕ್ ಡೆನ್ಸ್ ಎಂದು ಕರೆಯಲ್ಪಡುವ ಹಾವುಗಳ ಅತಿದೊಡ್ಡ ಸಂಯೋಗ ಸಭೆಯಾಗಿದೆ . ಹಲವು ತಿಂಗಳ ಕಾಲ ಶಿಶಿರ ನಿದ್ರೆಯಲ್ಲಿರುವ ಈ ಹಾವುಗಳು ಸುಣ್ಣದ ಕಲ್ಲಿನ ಸಿಂಕ್‌ಹೋಲ್‌ಗಳಿಂದ ಹೊರಬಂದು ಮಧುಚಂದ್ರಕ್ಕೆ ಹೋಗುತ್ತದೆ. ಈ ಬಗ್ಗೆ ವಿಜ್ಞಾನಿಗಳು ಕೂಡ ಅಚ್ಚರಿಯನ್ನು ಪಟ್ಟಿದ್ದಾರೆ. ಹವಾಮಾನವು ಬೆಚ್ಚಗಾಗಲು ಪ್ರಾರಂಭಿಸಿದಾಗ ಅಂದರೆ ಏಪ್ರಿಲ್ ಅಂತ್ಯದಿಂದ ಮೇ ಆರಂಭದಲ್ಲಿ ಗಂಡು ಹಾವುಗಳು ಹೊರಕ್ಕೆ ಬಂದು, ಹೆಣ್ಣು ಹಾವುಗಳಿಗಾಗಿ ಕಾಯುತ್ತಿರುತ್ತದೆ.
ಹೆಣ್ಣು ಹಾವುಗಳು ಹೊರ ಬಂದ ನಂತರ ಅವುಗಳು ಒಟ್ಟು ಸೇರಿ ಒಂದು ಕಡೆ ಸೇರುತ್ತದೆ. ಇದೊಂದು ರೀತಿ ಹನಿಮೂನ್ನಂತಿರುತ್ತದೆ. ಅದು ವಾರ ಅಥವಾ ತಿಂಗಳುಗಳ ಕಾಲ ಅಲ್ಲಿಯೇ ಕಾಲ ಕಳೆಯುತ್ತದೆ. ಹೀಗೆ ಬಂದ ಹಾವುಗಳಲ್ಲಿ ಪೈಪೋಟಿ ಪ್ರಾರಂಭವಾಗುತ್ತದೆ. ಹೆಣ್ಣು ಹಾವಿಗಾಗಿ ಗಂಡು ಹಾವುಗಳಲ್ಲಿ ಸ್ಪರ್ಧೆ ಉಂಟಾಗುತ್ತದೆ. ಇದು ಹೆಣ್ಣು ಹಾವುಗಳನ್ನು ಗೊಂದಲಕ್ಕೆ ಒಳಗಾಗಿಸಲು ಈ ರೀತಿ ಮಾಡುತ್ತದೆ ಎನ್ನಲಾಗಿದೆ.
ಮ್ಯಾನಿಟೋಬಾದ ಇಂಟರ್‌ಲೇಕ್ ಪ್ರದೇಶದ ವಿಶಿಷ್ಟ ಭೌಗೋಳಿಕ ಲಕ್ಷಣಗಳು ಈ ಹಾವುಗಳಿಗೆ ಮಿಲನಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಒದಗಿಸುತ್ತವೆ. ಈ ಪ್ರದೇಶವು ಸುಣ್ಣದ ಕಲ್ಲಿನಿಂದ ಕೂಡಿದ್ದು ಸಿಂಕ್‌ಹೋಲ್‌ಗಳನ್ನು ಹೊಂದಿದೆ. ಜತೆಗೆ ಸುತ್ತಮುತ್ತಲಿನ ಜೌಗು ಪ್ರದೇಶಗಳಲ್ಲಿ ಕಪ್ಪೆಗಳು ಮತ್ತು ಸಣ್ಣ ಸಸ್ತನಿಗಳಂತಹ ಸಾಕಷ್ಟು ಆಹಾರ ಮೂಲಗಳನ್ನು ಪೂರೈಸುತ್ತವೆ.
ವಿಜ್ಞಾನಿಗಳು ಮಾತ್ರ, ಅಲ್ಲಿಗೆ ಬರುವ ಪ್ರವಾಸಿಗರು ನೋಡಬಹುದು. ಇದು ಆಕರ್ಷಣೆ ತಾಣವಾಗಿದೆ. ಏಪ್ರಿಲ್ ಅಂತ್ಯದಲ್ಲಿ ಬಿಸಿಲಿನ ದಿನಗಳಲ್ಲಿ ಮತ್ತು ಮೇ ತಿಂಗಳ ಮೊದಲ ಮೂರು ವಾರಗಳಲ್ಲಿ ಇದನ್ನು ನೋಡಬಹುದು. ಆದರೆ 3 ಕಿ.ಲೋ ಮೀಟರ್ ದೂರದಲ್ಲಿ ಇವುಗಳು ಕಾಣಲು ಸಿಗುತ್ತದೆ