ಮುಂಬೈ :ಕ್ಯಾನ್ಸರ್ ಚಿಕಿತ್ಸೆಗೆ ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ; ಆರೋಪಿ ಅರೆಸ್ಟ್

ಮುಂಬೈ: ಚಿಕಿತ್ಸೆ ಕೊಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬ 13 ವರ್ಷದ ಕ್ಯಾನ್ಸರ್ ರೋಗಿ ಮೇಲೆ ಅತ್ಯಾಚಾರ ನಡೆಸಿ, ಗರ್ಭಿಣಿ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಬಿಹಾರದಲ್ಲಿ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. ಬಿಹಾರ ಮೂಲದ ಬಾಲಕಿ ಕ್ಯಾನ್ಸ್ ಚಿಕಿತ್ಸೆಗೆಂದು ಮಹಾರಾಷ್ಟ್ರಕ್ಕೆ ಬಂದಿದ್ದಳು.
ಬಿಹಾರ ಮೂಲದ 13 ವರ್ಷದ ಬಾಲಕಿ ಆಕೆಯ ಪೋಷಕರು ಜೊತೆ ಮಹಾರಾಷ್ಟ್ರಕ್ಕೆ ಆಗಮಿಸಿದ್ದರು. ಈ ವೇಳೆ ಅವಳದ್ದೇ ಊರಿನ ಯುವಕನೋರ್ವ ಸಹಾಯದ ನೆಪದಲ್ಲಿ ಬದ್ಲಾಪುರದಲ್ಲಿ ಬಾಲಕಿ ಹಾಗೂ ಆಕೆಯ ಕುಟುಂಬಸ್ಥರು ವಾಸಿಸಲು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದಿದ್ದ.
ಮೊದಲೇ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿ ಬಾಲಕಿಯ ಮೇಲೆ ಮೂರು ಬಾರಿ ಅತ್ಯಾಚಾರವೆಸಾಗಿದ್ದಾನೆ. ಈ ಬಗ್ಗೆ ಹೇಳಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.
ಇತ್ತ ಬಾಲಕಿ ಮುಂಬೈನ ಆಸ್ಪತ್ರೆಯೊಂದರಲ್ಲಿ ಕಿಮೋ ಥೆರಪಿಗೆ ಚಿಕಿತ್ಸೆ ಪಡೆಯುತ್ತಿರುವಾಗ ಬಾಲಕಿ ಗರ್ಭಿಣಿ ಎಂಬುವುದು ಗೊತ್ತಾಗಿದೆ. ಕೂಡಲೇ ವೈದ್ಯರು ಬಾಲಕಿಯ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ.
ಸದ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.