ಬೆಂಗಳೂರು :ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್‌ ಕಿಶನ್‌ ಮತ್ತೆ ಬಂಧನ, ವಿನಯ್ ಗೌಡಗೂ ಸಂಕಷ್ಟ

ಬೆಂಗಳೂರು :ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್‌ ಕಿಶನ್‌ ಮತ್ತೆ ಬಂಧನ, ವಿನಯ್ ಗೌಡಗೂ ಸಂಕಷ್ಟ

ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲಿಗೆ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್‌ ಅವರನ್ನು ಬೆಂಗಳೂರಿನ ಬಸವೇಶ್ವರ ನಗರದ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ರಜತ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕೋರ್ಟ್ ಎದುರು ಹಾಜರುಪಡಿಸಲು ಸಿದ್ಧತೆ ನಡೆದಿದೆ.

ಕೇಸ್ನಲ್ಲಿ ಇದುವರೆಗೆ ಬಳಕೆ ಮಾಡಿದ್ದ ಮಾರಕಾಸ್ತ್ರವನ್ನು ಪೊಲೀಸರ ಎದುರು ಹಾಜರುಪಡಿಸಿಲ್ಲ. ಹೀಗಾಗಿ ಸಾಕ್ಷಿನಾಶ ಎಂದು ಸಹ ಪೋಲಿಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ.

ಈ ವೇಳೆ ಕೋರ್ಟ್ ಕೆಲ ಷರತ್ತುಗಳನ್ನು ಮೇಲೆ ಜಾಮೀನು ನೀಡಿತ್ತು. ಇದರಲ್ಲಿ ಅವರು ವಿಚಾರಣೆಗೆ ಹಾಜರಿ ಹಾಕಲೇಬೇಕು ಎಂಬುದು ಕೂಡ ಆಗಿತ್ತು.

ರಜತ್ ಅವರು ಕೋರ್ಟ್ ವಿಚಾರಣೆಗೆ ಹಾಜರಿ ಹಾಕಿಲ್ಲ. ಹೀಗಾಗಿ, ರಜತ್ ವಿರುದ್ಧ ನಾನ್ ಬೇಲೆಬೆಲ್ ವಾರಂಟ್ ಹೊರಡಿಸಿತ್ತು. ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಸೂಚಿಸಿತ್ತು. ಅವರನ್ನು 24ನೇ ಎಸಿಜೆಎಂ ಕೋರ್ಟ್ಗೆ ಪೊಲೀಸರು ಹಾಜರುಪಡಿಸಲಿದ್ದಾರೆ. ವಿನಯ್ ಗೌಡ ಕೂಡ ಕೋರ್ಟ್ ಷರತ್ತುಗಳನ್ನು ಉಲ್ಲಂಘಿಸಿದ್ದಾರೆನ್ನಲಾಗಿದ್ದು, ಅವರಿಗೂ ಬಂಧನ ಭೀತಿ ಎದುರಾಗಿದೆ.

Ads on article

Advertise in articles 1

advertising articles 2

Advertise under the article