ಮೂಲ್ಕಿ :ಬಪ್ಪನಾಡು ರಥೋತ್ಸವ ನಡೆಯುತ್ತಿದ್ದಾಗಲೇ ನೆಲಕ್ಕುರುಳಿದ ಮೇಲ್ಭಾಗದ ತೇರು ! ಭಕ್ತಜನರು ಪವಾಡ ಸದೃಶ ಪಾರು..!! ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲ ವಿಜೃಂಭಣೆಯ ವಾರ್ಷಿಕ ಉತ್ಸವದಲ್ಲಿ ರಥೋತ್ಸವ ನಡೆಯುತ್ತಿದ್ದಾಗ ನಡೆದ ದುರ್ಘಟನೆ.

ಮಂಗಳೂರು: ಮುಲ್ಕಿ ಸಮೀಪದ ಪ್ರಸಿದ್ಧ ಕ್ಷೇತ್ರ, ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲದಲ್ಲಿ ವಿಜೃಂಭಣೆಯಿಂದ ವಾರ್ಷಿಕ ಉತ್ಸವದಲ್ಲಿ ರಥೋತ್ಸವ ನಡೆಯುತ್ತಿದ್ದಾಗ ದುರ್ಘಟನೆ ನಡೆದಿದೆ. ನಸುಕಿನ 2 ಗಂಟೆ ವೇಳೆಗೆ ರಥೋತ್ಸವ ನಡೆಯುತ್ತಿದ್ದಾಗ ಮೇಲ್ಭಾಗದ ತೇರು ಉರುಳಿ ನೆಲಕ್ಕೆ ಬಿದ್ದಿದೆ.
ದೇವಸ್ಥಾನ ಸುತ್ತ ಆವರಣದಲ್ಲಿ ದೇವರ ಹೆಸರಲ್ಲಿ ಘೋಷಣೆ ಕೂಗುತ್ತ ರಥ ಎಳೆಯುತ್ತಿದ್ದಾಗಲೇ ಮೇಲ್ಭಾಗದ ತೇರು ನೆಲಕ್ಕೆ ಉರುಳಿ ಬಿದ್ದಿದೆ. ರಥೋತ್ಸವ ನಡೆಯುತ್ತಿದ್ದಾಗ ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದರೂ ಅಪಾಯ ಉಂಟಾಗಿಲ್ಲ. ರಥ ಒಂದು ಕಡೆಗೆ ವಾಲುತ್ತಿದ್ದಂತೆ ಅಲ್ಲಿದ್ದವರು ಮತ್ತೊಂದು ಕಡೆಗೆ ಓಡಿದ್ದಾರೆ. ಈ ವೇಳೆ, ರಥದಲ್ಲಿ ದೇವರ ಜೊತೆ ಅರ್ಚಕರಿದ್ದರೂ ಯಾವುದೇ ತೊಂದರೆಯಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ರಥೋತ್ಸವ ನೆಲಕ್ಕೆ ಉರುಳಿ ಬೀಳುತ್ತಿದ್ದಂತೆ ಸೇರಿದ್ದ ಜನರು ದಿಗ್ಭ್ರಾಂತರಾಗಿದ್ದು ಭಯಗೊಂಡಿದ್ದಾರೆ. ಆದರೆ ಯಾವುದೇ ಅಪಾಯ ಆಗದೇ ಇದ್ದುದರಿಂದ ಮತ್ತು ರಥವನ್ನು ಎಳೆಯುವಾಗ ತಿರುವಿನಲ್ಲಿ ವೇಗ ಕಡಿಮೆಗೊಳಿಸದೆ ಎಳೆದಿದ್ದರಿಂದ ಮೇಲ್ಭಾಗದ ತೇರು ಉರುಳಿ ಬಿದ್ದಿದೆ ಎನ್ನಲಾಗಿದೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಬಪ್ಪನಾಡಿನಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿದ್ದು ರಥ ಉರುಳಿ ಬಿದ್ದರೂ ಉತ್ಸವ ನಿಲ್ಲಿಸದೆ ಆನಂತರ ಚಂದ್ರಮಂಡಲ ರಥೋತ್ಸವ ಮಾಡಿದ್ದಾರೆ.