ತಮಿಳುನಾಡು :ನಟ ಅಜಿತ್ ಕುಮಾರ್ ದಿಢೀರ್ ಆಸ್ಪತ್ಪೆ ದಾಖಲು.
Wednesday, April 30, 2025

ತಮಿಳು ನಾಡು :ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಗೌರವ ಸ್ವೀಕರಿಸಿದ ನಂತರ ಅಜಿತ್ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ.
ನಟ ಅಜಿತ್ ಕುಮಾರ್ ಪತ್ನಿ ಜೊತೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಪದ್ಮ ಭೂಷಣ ಪ್ರಶಸ್ತಿ ವಿಜೇತ ಅಜಿತ್ ನೋಡಲು ಅಭಿನಂದನೆ ಸಲ್ಲಿಸಲು ಕಿಕ್ಕಿರಿದು ಅಭಿಮಾನಿಗಳು ಸೇರಿದ್ದರು. ನಟ ಅಜಿತ್ ಹೊರಬರುತ್ತಿದ್ದಂತೆ ಅಬಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಇದರಿಂದ ಅಜಿತ್ ಕಾಲಿಗೆ ಕಾಯವಾಗಿದೆ. ಕಾರ್ ರೇಸ್ ವೇಳೆ ಗಾಯಗೊಂಡಿದ್ದ ಕಾಲಿಗೆ ಮತ್ತೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಜಿತ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ.
ತಮಿಳು ಸಿನಿಮಾದಲ್ಲಿ ಮುಂಚೂಣಿಯ ಮಾಸ್ ನಟ ಅಜಿತ್ ಕುಮಾರ್. ಇತ್ತೀಚೆಗೆ ಬಿಡುಗಡೆಯಾಗ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಂಡಿತು.