ತಮಿಳುನಾಡು :ಪತ್ನಿ ಎದುರೇ ಪತಿಯ ಶಿರಚ್ಛೇದ, 8 ಕಿ.ಮೀ ದೂರದಲ್ಲಿ ರುಂಡ ಪತ್ತೆ.
Friday, April 18, 2025

ತಮಿಳುನಾಡು: ಪತ್ನಿ ಎದುರೇ ಪತಿಯ ಶಿರಚ್ಛೇದ ಮಾಡಿರುವ ಘಟನೆ ತಮಿಳುನಾಡಿನ ತೆಂಕಸಿ ಬಳಿ ನಡೆದಿದೆ.
ತೆಂಕಸಿಯಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಅಪರಿಚಿತ ಗುಂಪೊಂದು ಹೆಂಡತಿಯ ಎದುರೇ ಶಿರಚ್ಛೇದ ಮಾಡಿ, ತಲೆ ತೆಗೆದುಕೊಂಡು ಪರಾರಿಯಾಗಿದ್ದರು. ಅಪರಾಧ ಸ್ಥಳದಿಂದ ಸುಮಾರು 8 ಕಿ.ಮೀ ದೂರದಲ್ಲಿ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು 35 ವರ್ಷದ ಕುಥಾಲಿಂಗಂ ಎಂದು ಗುರುತಿಸಲಾಗಿದೆ. ಅವರು ತಮ್ಮ ಪತ್ನಿಯೊಂದಿಗೆ ಕೀಳಪುಲಿಯೂರಿನಲ್ಲಿ ವಾಸಿಸುತ್ತಿದ್ದರು.
ಪೊಲೀಸ್ ವರದಿಗಳ ಪ್ರಕಾರ, ಏ.16ರಂದು ದಂಪತಿ ಸಂಜೆ ತಮ್ಮ ಹಳ್ಳಿಯಲ್ಲಿರುವ ಪಿಡಿಎಸ್ ಅಂಗಡಿಗೆ ಹೋಗಿದ್ದರು. ಈ ವೇಳೆ ನಾಲ್ವರ ಗುಂಪೊಂದು ಅವರ ಮೇಲೆ ಹೊಂಚು ಹಾಕಿ ದಾಳಿ ನಡೆಸಿತ್ತು. ಪತಿಯ ಮೇಲಿನ ದಾಳಿಯನ್ನು ತಡೆಯಲು ಯತ್ನಿಸಿದಾಗ ಪತ್ನಿಯನ್ನು ತಳ್ಳಿದ ಗುಂಪು ಕುಥಾಲಿಂಗಂ ಕುತ್ತಿಗೆಯನ್ನೇ ಕಡಿದಿದೆ. ಬಳಿಕ ತಲೆಯೊಂದಿಗೆ ಪರಾರಿಯಾಗಿದೆ.